ಮುಂಬೈ[ಮಾ.12]: ಇಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯ ಸೂಪರ್ ಲೀಗ್‌ನಲ್ಲಿ ಅಸ್ಸಾಂ ವಿರುದ್ಧ, ಕರ್ನಾಟಕ 7 ವಿಕೆಟ್ ಗಳಿಂದ ಸೋತಿದ್ದರೂ ಫೈನಲ್ ಪ್ರವೇಶಿಸಿದೆ. 

15 ವರ್ಷಗಳ ಬಳಿಕ ಕರ್ನಾಟಕ ತಂಡ, ರಾಷ್ಟ್ರೀಯ ಟಿ20ಯಲ್ಲಿ ಫೈನಲ್‌ಗೇರಿದೆ. ಟೂರ್ನಿಯಲ್ಲಿ ಸತತ 9 ಗೆಲುವು ದಾಖಲಿಸಿದ್ದ ಕರ್ನಾಟಕ, ಅಸ್ಸಾಂ ವಿರುದ್ಧ ಮೊದಲ ಸೋಲುಂಡಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ 6 ವಿಕೆಟ್‌ಗೆ 115 ರನ್ ಗಳಿಸಿತು. ಈ ಸಾಧಾರಣ ಗುರಿ ಬೆನ್ನತ್ತಿದ ಅಸ್ಸಾಂ 19.1 ಓವರ್‌ಗೆ 3 ವಿಕೆಟ್ ಗೆ 116 ರನ್ ಗಳಿಸಿತು.

ಸ್ಕೋರ್: 
ಕರ್ನಾಟಕ 115/6
ಅಸ್ಸಾಂ 116/3