ರಷ್ಯಾ(ಅ.07): ಮಹಿಳಾ ವಿಶ್ವ ಬಾಕ್ಸಿಂಗ್‌ನಲ್ಲಿ ಮಾಜಿ ಚಾಂಪಿಯನ್ ಸರಿತಾ ದೇವಿ (60 ಕೆ.ಜಿ) ಹಾಗೂ ನಂದಿನಿ (81 ಕೆ.ಜಿ) ಹೊರಬಿದ್ದಿದ್ದಾರೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೊದಲ ಸುತ್ತಲ್ಲಿ ಮೇರಿಗೆ ಬೈ

ಭಾನುವಾರ ಇಲ್ಲಿ ನಡೆದ ಮಹಿಳೆಯರ 60 ಕೆ.ಜಿ ವಿಭಾಗದ ಸ್ಪರ್ಧೆಯ ಅಂತಿಮ 32ರ ಸುತ್ತಿನಲ್ಲಿ ಸ್ಥಳೀಯ ರಷ್ಯಾ ಬಾಕ್ಸರ್ ನಟಾಲಿಯಾ ಶಾಡ್ರಿನಾ ವಿರುದ್ಧ ಸರಿತಾ 0-5 ರಿಂದ ಸೋಲು ಕಂಡರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸರಿತಾ 2ನೇ ಸುತ್ತಿನಲ್ಲಿ ಸೋಲಿನ ಆಘಾತ ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಗೆದ್ದ ಮೊದಲ ಭಾರತೀಯ ಅಮಿತ್!

2006ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಸರಿತಾ ದೇವಿ, 2019ರ ವಿಶ್ವ ಬಾಕ್ಸಿಂಗ್ ಅಭಿಯಾನ ಕೊನೆಗೊಂಡಂತಾಗಿದೆ. ಮತ್ತೊಂದು ಪಂದ್ಯದಲ್ಲಿ 20 ವರ್ಷ ವಯಸ್ಸಿನ ನಂದಿನಿ ಆಕ್ರಮಣಕಾರಿ ಪ್ರದರ್ಶನ ನೀಡಿದ್ದರೂ ಜರ್ಮನ್ ತಂಡದ ಬಾಕ್ಸರ್ ಇರಿನಾ ನಿಕೋಲೆಟ್ ವಿರುದ್ಧ 0-5ರಿಂದ ಸೋಲು ಕಂಡರು.

ಮೊದಲ ಪಂದ್ಯ ಗೆದ್ದ ಸವೀಟಿ ಬೋರಾ (75 ಕೆ.ಜಿ), ಜಮುನಾ ಬೋರೋ (54 ಕೆ.ಜಿ) ಈಗಾಗಲೇ ಪ್ರಿ ಕ್ವಾರ್ಟರ್ ಪ್ರವೇಶಿಸಿದ್ದಾರೆ.