ಜೈಪುರ(ಮೇ.08): ಮಹಿಳಾ ಐಪಿಎಎಲ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಟ್ರೈಲ್‌ಬ್ಲೇಜರ್ಸ್ 2ನೇ ಪಂದ್ಯದಲ್ಲಿ ಮುಗ್ಗರಿಸಿದೆ. ವೆಲೋಸಿಟಿ ವಿರುದ್ಧ ಹೋರಾಡಿದ ಟ್ರೈಲ್‌ಬ್ಲೇಜರ್ಸ್‌ಗೆ ಗೆಲುವಿನ ಸಿಹಿ ಸಿಗಲಿಲ್ಲ. ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ವೆಲೋಸಿಟಿ, ಅಂತಿಮ ಹಂತದಲ್ಲಿ ಬ್ಯಾಟಿಂಗ್‌ನಲ್ಲಿ ಆತಂಕಕ್ಕೆ ಒಳಗಾಯಿತು. ಆದರೆ ಹರಸಾಹಸಪಟ್ಟು  ವೆಲೋಸಿಟಿ 2 ವಿಕೆಟ್ ಗೆಲುವು ಸಾಧಿಸಿತು. 

ಗೆಲುವಿಗೆ 113 ರನ್ ಟಾರ್ಗೆಟ್ ಪಡೆದ ವೆಲೋಸಿಟಿ ಆರಂಭದಲ್ಲೇ ಹೆಲೆ ಮ್ಯಾಥ್ಯೂಸ್ ವಿಕೆಟ್ ಕಳೆದುಕೊಂಡರು ಆತಂಕಕ್ಕೆ ಒಳಗಾಗಲಿಲ್ಲ. ಶೆಫಾಲಿ ವರ್ಮಾ ಹಾಗೂ ಡೆನಿಯಲ್ ವೈಟ್ ಜೊತೆಯಾಟದಿಂದ  ವೆಲೋಸಿಟಿ ಗೆಲುವಿನತ್ತ ಹೆಜ್ಜೆ ಹಾಕಿತು. 2ನೇ ವಿಕೆಟ್‌ಗೆ ಈ ಜೋಡಿ 58 ರನ್ ಜೊತೆಯಾಟ ನೀಡಿತು. ಶೆಫಾಲಿ ವರ್ಮಾ 34 ರನ್ ಸಿಡಿಸಿ ಔಟಾದರು.

ಟ್ರೈಲ್‌ಬ್ಲೇಜರ್ಸ್ ಬೌಲರ್‌ಗಳು ವಿಕೆಟ್ ಕಬಳಿಸಿ ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ ಪ್ರಯೋಜನವಾಗಿಲಿಲ್ಲ. ನಾಯಕಿ ಮಿಥಾಲಿ ರಾಜ್ ಹಾಗೂ ಡೆನಿಯಲ್ ಜೊತೆಯಾಟದಿಂದ ವೆಲೋಸಿಟಿ ಗೆಲುವು ಖಚಿತಗೊಂಡಿತು.  ವೈಟ್ 46 ರನ್ ಸಿಡಿಸಿ ಔಟಾದರು. ಮಿಥಾಲಿ 17 ರನ್ ಸಿಡಿಸಿ ಔಟಾದರು. 

ಅಂತಿಮ ಹಂತದಲ್ಲಿ ವೆಲೋಸಿಟಿ ಆತಂಕಕ್ಕೆ ಒಳಗಾಗಿಯಿತು. ಗೆಲುವಿಗೆ ಇನ್ನು 2 ರನ್ ಇರುವಾಗ 5 ವಿಕೆಟ್ ಕಳೆದುಕೊಂಡಿತು.  ಕನ್ನಡತಿ ವೇದಾ ಕೃಷ್ಣಮೂರ್ತಿ, ಸುಶ್ಮ ವರ್ಮಾ , ಶಿಖಾ ಪಾಂಡೆ. ಅಮೇಲಿಯಾ ಕೇರ್ ಡಕೌಟ್ ಆದರು. ಸ್ಪಿನ್ ಮೋಡಿ ಮಾಡಿದ ದೀಪ್ತಿ ಶರ್ಮಾ 4 ವಿಕೆಟ್ ಕಬಳಿಸಿ ಮಿಂಚಿದರು.ಸುಶಿ ಪ್ರಧಾನ್ 2 ರನ್ ಸಿಡಿಸಿ ವೆಲೋಸಿಟಿಗೆ ಗೆಲುವು ತಂದುಕೊಟ್ಟರು. 18  ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಸಿಡಿಸಿತು. ಈ ಮೂಲಕ ವೆಲೋಸಿಟಿ 2 ವಿಕೆಟ್ ಗೆಲುವು ಸಾಧಿಸಿತು.