ಜೈಪುರ(ಮೇ.08): ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದಲ್ಲಿಂದು ಟ್ರೈಲ್‌ಬ್ಲೇಜರ್ಸ್ ಹಾಗೂ ವೆಲೋಸಿಟಿ ತಂಡಗಳು ಮುಖಾಮುಖಿಯಾಗಿದೆ. ಸೂಪರ್‌ನೋವಾಸ್ ವಿರುದ್ಧದ ಮೊದಲ ಪಂದ್ಯ ಗೆದ್ದು ಬೀಗಿದ್ದ ಟ್ರೈಲ್‌ಬ್ಲೇಜರ್ಸ್ ಇದೀಗ ವೆಲೋಸಿಟ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 112 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟ್ರೈಲ್‌ಬ್ಲೇಜರ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕಿ ಸ್ಮೃತಿ ಮಂಧಾನ ಕೇವಲ 10 ರನ್ ಸಿಡಿಸಿ ನಿರ್ಗಮಿಸಿದರು. ಇನ್ನು ಸುಜಿ ಬೇಟ್ಸ್ 26 ರನ್ ಕಾಣಿಕೆ ನೀಡಿದರು. ಸ್ಟೇಫಾನಿ ಟೇಲರ್ 5 ರನ್‌ಗೆ ಸುಸ್ತಾದರು. ಆದರೆ ಹರ್ಲಿನ್ ಡಿಯೋಲ್ ತಂಡಕ್ಕೆ ಚೇತರಿಕೆ ನೀಡಿದರು.

ಇತ್ತ ದೀಪ್ತಿ ಶರ್ಮಾ 16 ರನ್ ಸಿಡಿಸಿ ಔಟಾದರು. ಹರ್ಲಿನ್ 43 ರನ್ ಕಾಣಿಕೆ ನೀಡಿದರು. ಭಾರ್ತಿ ಫುಲ್ಮಾಲಿ ಕೇವಲ 2 ರನ್ ಸಿಡಿಸಿ ಔಟಾದರು. ಈ ಮೂಲಕ ಟ್ರೈಲ್‌ಬ್ಲೇಜರ್ಸ್ 6 ವಿಕೆಟ್ ನಷ್ಟಕ್ಕೆ 112 ರನ್ ಸಿಡಿಸಿತು. ಈ ಮೂಲಕ ಮಿಥಾಲಿ ರಾಜ್ ನಾಯಕತ್ವದ ವೆಲೋಸಿಟಿ ತಂಡಕ್ಕೆ 113 ರನ್ ಸುಲಭ ಗುರಿ ನೀಡಿದೆ.