ಆಟಗಾರರ ವೇತನ ಹೆಚ್ಚಳ ಪ್ರಸ್ತಾಪವನ್ನು ಈಗಾಗಲೇ ಬಿಸಿಸಿಐನ ಖಜಾಂಚಿ ಅನಿರುದ್ಧ್ ಚೌಧರಿ, ಬಿಸಿಸಿಐನ ಹಣಕಾಸು ಸಮಿತಿ ಮುಂದಿರಿಸಿದ್ದು, ಶುಕ್ರವಾರ ನಡೆವ ಸಭೆಯಲ್ಲಿ ಇದಕ್ಕೆ ಸಮ್ಮತಿ ದೊರೆತರೆ ಆಟಗಾರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ
ನವದೆಹಲಿ(ಅ.09): ಮಹಿಳಾ ಆಟಗಾರ್ತಿಯರು ಹಾಗೂ ಟೆಸ್ಟ್ ಮತ್ತು ದೇಸಿ ಟೂರ್ನಿಗಳಲ್ಲಿ ಆಡುವ ಕ್ರಿಕೆಟಿಗರ ವೇತನ ಹೆಚ್ಚಳಕ್ಕೆ ಬಿಸಿಸಿಐ ಯೋಜನೆ ರೂಪಿಸಿದೆ.
ಆಟಗಾರರ ವೇತನ ಹೆಚ್ಚಳ ಪ್ರಸ್ತಾಪವನ್ನು ಈಗಾಗಲೇ ಬಿಸಿಸಿಐನ ಖಜಾಂಚಿ ಅನಿರುದ್ಧ್ ಚೌಧರಿ, ಬಿಸಿಸಿಐನ ಹಣಕಾಸು ಸಮಿತಿ ಮುಂದಿರಿಸಿದ್ದು, ಶುಕ್ರವಾರ ನಡೆವ ಸಭೆಯಲ್ಲಿ ಇದಕ್ಕೆ ಸಮ್ಮತಿ ದೊರೆತರೆ ಆಟಗಾರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. ವೇತನ ಪರಿಷ್ಕರಣೆಯಾದರೆ ರಣಜಿ ಹಾಗೂ ದುಲೀಪ್ ಟ್ರೋಫಿ ವೇಳೆ ಆಟಗಾರರಿಗೆ ಇದೀಗ ಒಂದು ದಿನಕ್ಕೆ ₹ 10 ಸಾವಿರ ವೇತನ ನೀಡುತ್ತಿದ್ದು, ಇದು ₹ 25 ಸಾವಿರಕ್ಕೆ ಹೆಚ್ಚಳವಾಗಲಿದೆ.
ಆಟಗಾರ್ತಿಯರಿಗೆ ಲಭಿಸುತ್ತಿರುವ ವೇತನ ದಿನಕ್ಕೆ ₹3,500ರಿಂದ ₹12,500ಕ್ಕೆ ಏರಿಕೆ ಆಗಲಿದೆ.
