Asianet Suvarna News Asianet Suvarna News

ಮಹಿಳಾ ಟಿ20 ವಿಶ್ವಕಪ್‌: ಇಂಗ್ಲೆಂಡ್‌ಗೆ ಭರ್ಜರಿ ಜಯ

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, 9 ವಿಕೆಟ್‌ ನಷ್ಟಕ್ಕೆ 76 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 3 ವಿಕೆಟ್‌ಗೆ 55 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಗುರಿಯನ್ನು 16 ಓವರ್‌ಗಳಲ್ಲಿ 64 ರನ್‌ಗೆ ಪರಿಷ್ಕರಿಸಲಾಯಿತು. ಬಳಿಕ ಕೇವಲ 3 ಎಸೆತಗಳಲ್ಲಿ 9 ರನ್‌ ಗಳಿಸಿ ಇಂಗ್ಲೆಂಡ್‌ ಜಯದ ನಗೆ ಬೀರಿತು.

Womans T20 World Cup 2018  England beat Bangladesh after more rain in St Lucia
Author
St Lucia, First Published Nov 14, 2018, 11:15 AM IST

ಸೇಂಟ್‌ ಲೂಸಿಯಾ(ನ.14): ಇಂಗ್ಲೆಂಡ್‌ ತಂಡ ಮಂಗಳವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಡಕ್ವತ್‌ರ್‍ ಲೂಯಿಸ್‌ ನಿಯಮದನ್ವಯ 7 ವಿಕೆಟ್‌ಗಳ ಗೆಲುವು ಸಾಧಿಸಿತು. 

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, 9 ವಿಕೆಟ್‌ ನಷ್ಟಕ್ಕೆ 76 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 3 ವಿಕೆಟ್‌ಗೆ 55 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಗುರಿಯನ್ನು 16 ಓವರ್‌ಗಳಲ್ಲಿ 64 ರನ್‌ಗೆ ಪರಿಷ್ಕರಿಸಲಾಯಿತು. ಬಳಿಕ ಕೇವಲ 3 ಎಸೆತಗಳಲ್ಲಿ 9 ರನ್‌ ಗಳಿಸಿ ಇಂಗ್ಲೆಂಡ್‌ ಜಯದ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 76/9, ಇಂಗ್ಲೆಂಡ್‌ 64/3

ಲಂಕಾ ವಿರುದ್ಧ ದ.ಆಫ್ರಿಕಾಕ್ಕೆ ಗೆಲುವು

ಸೇಂಟ್‌ ಲೂಸಿಯಾ(ನ.14): ದಕ್ಷಿಣ ಆಫ್ರಿಕಾ ತಂಡ, ಮಂಗಳವಾರ ಇಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಜಯ ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 8 ವಿಕೆಟ್‌ ನಷ್ಟಕ್ಕೆ 99 ರನ್‌ ಗಳಿಸಿತು. ಸುಲಭ ಸವಾಲು ಸ್ವೀಕರಿಸಿದ ದಕ್ಷಿಣ ಆಫ್ರಿಕಾ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 102 ರನ್‌ ಗಳಿಸಿ ಗೆಲುವಿನ ದಡ ಸೇರಿತು.

ದ.ಆಫ್ರಿಕಾ ಪರ ಮರಿಜಾನ್ನೆ ಕಾಪ್‌(38) ಮತ್ತು ನಾಯಕಿ ವ್ಯಾನ್‌ ನೀಕರ್ಕ್(33) ಉತ್ತಮ ಬ್ಯಾಟಿಂಗ್‌ ನಡೆಸಿದರೆ, ಶಬ್ನಿಮ್‌ ಇಸ್ಮಾಯಿಲ್‌ 3 ವಿಕೆಟ್‌ ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ 99/8, ದ.ಆಫ್ರಿಕಾ 102/3
 
Follow Us:
Download App:
  • android
  • ios