ವಿಂಬಲ್ಡನ್ 2019 ಪ್ರಿ ಕ್ವಾರ್ಟರ್‌ಫೈನಲ್‌ಗೆ ಸೆರೆನಾ
ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ಸೆರೆನಾ, ಜರ್ಮನಿಯ ಜೂಲಿಯಾ ಜಾರ್ಜಸ್ ವಿರುದ್ಧ 6-3, 6-4 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು. ಇದರೊಂದಿಗೆ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಲಂಡನ್[ಜು.07]: ದಾಖಲೆ ಗ್ರ್ಯಾಂಡ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ಮಾಜಿ ವಿಶ್ವ ನಂ.1 ಅಮೆರಿಕದ ಸೆರೆನಾ ವಿಲಿಯಮ್ಸ್, ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ವಿಂಬಲ್ಡನ್ 2019: ಪ್ರಿ ಕ್ವಾರ್ಟರ್‌ಗೆ ಜೋಕೋವಿಚ್
ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ಸೆರೆನಾ, ಜರ್ಮನಿಯ ಜೂಲಿಯಾ ಜಾರ್ಜಸ್ ವಿರುದ್ಧ 6-3, 6-4 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು. ವಿಂಬಲ್ಡನ್‌ನಲ್ಲಿ 16ನೇ ಬಾರಿ ಸೆರೆನಾ 4ನೇ ಸುತ್ತಿಗೇರಿದ ಸಾಧನೆ ಮಾಡಿದರು. 37 ವರ್ಷ ವಯಸ್ಸಿನ ಸೆರೆನಾ, ಜರ್ಮನಿಯ ಆಟಗಾರ್ತಿ ಎದುರು ಸುಲಭ ಗೆಲುವು ಸಾಧಿಸಿದರು. ಒಂದೊಮ್ಮೆ ಸೆರೆನಾ ಪ್ರಿ ಕ್ವಾರ್ಟರ್‌ನಲ್ಲಿ ಜಯಿಸಿದರೆ, ಕ್ವಾರ್ಟರ್‌ನಲ್ಲಿ ಸ್ಪೇನ್‌ನ ಕಾರ್ಲ ಸೂರೆಜ್ ರನ್ನು ಎದುರಿಸಲಿದ್ದರೆ. ಹಾಲಿ ವಿಶ್ವ ನಂ.1 ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ, ಬ್ರಿಟನ್‌ನ ಹ್ಯಾರಿಟ್ ಡಾರ್ಟ್ ಎದು ರು 6-1, 6-1 ನೇರ ಸೆಟ್‌ಗಳಲ್ಲಿ ಗೆದ್ದು 4ನೇ ಸುತ್ತಿಗೆ ಪ್ರವೇಶಿಸಿದರು. ಉಳಿದಂತೆ ಪೆಟ್ರಾ ಕ್ವಿಟೋವಾ, ಜೋಹಾನ್ನ ಕೊಂತಾ 16ರ ಸುತ್ತಿಗೇರಿದರು.
ನಡಾಲ್‌ಗೆ 51ನೇ ಜಯ: ಸ್ಪೇನ್‌ನ ರಾಫೆಲ್ ನಡಾಲ್ ವಿಂಬಲ್ಡನ್‌ನಲ್ಲಿ 51ನೇ ಗೆಲುವು ದಾಖಲಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ನಡಾಲ್, ಫ್ರಾನ್ಸ್‌ನ ಜೋ ವಿಲ್‌ಫ್ರೆಡ್ ತ್ಸೊಂಗಾ ವಿರುದ್ಧ 6-2, 6-3, 6-2 ಸೆಟ್‌ಗಳಲ್ಲಿ ಗೆದ್ದು 4ನೇ ಸುತ್ತಿಗೇರಿದ್ದಾರೆ. ಈ ಋತುವಿನಲ್ಲಿ ನಡಾಲ್ 35ನೇ ಪಂದ್ಯವನ್ನು ಗೆದ್ದಿದ್ದಾರೆ. ಉಳಿದಂತೆ ಜಪಾನ್‌ನ ಕೇ ನಿಶಿಕೋರಿ, ಅಮೆರಿಕದ ಸ್ಯಾಮ್ ಕರ‌್ರಿ ಗೆದ್ದು ಪ್ರಿ ಕ್ವಾರ್ಟರ್ ಗೇರಿದ್ದಾರೆ. 12ನೇ ಶ್ರೇಯಾಂಕಿತ ಇಟಲಿಯ ಫ್ಯಾಬಿಯೊ ಫೊಗ್ನಿನಿ 3ನೇ ಸುತ್ತಲ್ಲಿ ಸೋತು ಹೊರಬಿದ್ದಿದ್ದಾರೆ.
ಪಂದ್ಯ ವೀಕ್ಷಿ ಸಿದ ಇಂಗ್ಲೆಂಡ್ ಕ್ರಿಕೆಟಿಗರು:
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಈಗಾಗಲೇ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿರುವ ಇಂಗ್ಲೆಂಡ್ ತಂಡ, ಶನಿವಾರ ಇಂಗ್ಲೆಂಡ್ ತಂಡದ ಆಟಗಾರರು ಲಂಡನ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಟೂರ್ನಿಯಲ್ಲಿ ಕಾಣಿಸಿಕೊಂಡರು. ಇಂಗ್ಲೆಂಡ್ ತಂಡದ ಜಾನಿ ಬೇರ್‌ಸ್ಟೋವ್, ನಾಯಕ ಮಾರ್ಗನ್ ಸೇರಿದಂತೆ ಇತರರು ಪಂದ್ಯ ವೀಕ್ಷಿಸಿದರು.