Asianet Suvarna News Asianet Suvarna News

ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ: ಫೈನಲ್‌ನಲ್ಲಿ ಸೆರೆನಾ-ಸಿಮೋನಾ ಫೈಟ್!

ವಿಂಬಲ್ಡನ್ ಗ್ರ್ಯಾಂಡ್  ಸ್ಲಾಂ ಮಹಿಳಾ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸೆರೆನಾ ವಿಲಿಯಮ್ಸನ್ ಹಾಗೂ ಸಿಮೋನಾ ಹಾಲೆಪ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.  

Wimbledon 2019 Serena aiming for 24th grand slam against  simona halep
Author
Bengaluru, First Published Jul 12, 2019, 9:57 AM IST

ಲಂಡನ್‌(ಜು.12): ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಸೆರೆನಾ ವಿಲಿಯಮ್ಸ್‌ ಕನಸು ನನಸಾಗುವ ನಿರೀಕ್ಷೆ ಹುಟ್ಟಿದೆ. ಸೆರೆನಾ ಪ್ರಶಸ್ತಿ ಗೆಲುವಿನ ಹೊಸ್ತಿಲಿಗೆ ಬಂದಿದ್ದಾರೆ. ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಟೂರ್ನಿಯ ಮಹಿಳಾ ಸಿಂಗಲ್ಸ್‌ ಫೈನಲ್‌ಗೆ ಅಮೆರಿಕ ಆಟಗಾರ್ತಿ ಲಗ್ಗೆಯಿಟ್ಟಿದ್ದಾರೆ. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್‌ ವಿರುದ್ಧ ಸೆಣಸಾಡಲಿದ್ದಾರೆ.

ಇದನ್ನೂ ಓದಿ: ವಿಂಬಲ್ಡನ್ 2019: ಫೆಡರರ್ Vs ನಡಾಲ್ ಸೆಮಿಫೈಲ್ ಕುತೂಹಲ!

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೆರೆನಾ, ಚೆಕ್‌ ಗಣರಾಜ್ಯದ ಬಾರ್ಬೊರಾ ಸ್ಟೆರೖಕೋವಾ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಜಯಗಳಿಸಿದರು. ಕೇವಲ 59 ನಿಮಿಷಗಳಲ್ಲಿ ಪಂದ್ಯ ಗೆದ್ದ ಸೆರೆನಾ, 2001ರಿಂದ ಈ ವರೆಗೂ (2006 ಹೊರತುಪಡಿಸಿ) ಪ್ರತಿ ವರ್ಷವೂ ಕನಿಷ್ಠ ಒಂದು ಗ್ರ್ಯಾಂಡ್‌ಸ್ಲಾಂ ಟೂರ್ನಿಯ ಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ.

7 ಬಾರಿ ವಿಂಬಲ್ಡನ್‌ ಚಾಂಪಿಯನ್‌ ಸೆರೆನಾ, 32ನೇ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೇರಿದ ಸಾಧನೆ ಮಾಡಿದ್ದು, ಶನಿವಾರ 24ನೇ ಸಿಂಗಲ್ಸ್‌ ಪ್ರಶಸ್ತಿ ಗೆಲ್ಲುವ ಅವಕಾಶ ಹೊಂದಿದ್ದಾರೆ.

ಹಾಲೆಪ್‌ಗೂ ಸುಲಭ ಜಯ: ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ವಿರುದ್ಧ 6-1, 6-3 ಗೇಮ್‌ಗಳಲ್ಲಿ ಗೆದ್ದ ಮಾಜಿ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್‌, ವಿಂಬಲ್ಡನ್‌ ಫೈನಲ್‌ಗೇರಿದ ರೊಮೇನಿಯಾದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. 27 ವರ್ಷದ ಸಿಮೋನಾ, 2018ರಲ್ಲಿ ಫ್ರೆಂಚ್‌ ಓಪನ್‌ ಗೆದ್ದಿದ್ದರು. ತಮ್ಮ ವೃತ್ತಿಬದುಕಿನ 5ನೇ ಗ್ರ್ಯಾಂಡ್‌ಸ್ಲಾಂ ಫೈನಲ್‌ನಲ್ಲಿ ಅವರು ಆಡಲಿದ್ದಾರೆ. ಈ ಹಿಂದೆ 2014ರಲ್ಲಿ ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಆಡಿದ್ದ ಹಾಲೆಪ್‌, ಎಗ್ಯುನಿ ಬೌಷಾರ್ಡ್‌ ವಿರುದ್ಧ ಸೋಲುಂಡಿದ್ದರು.

ಸೆರೆನಾ
11ನೇ ಬಾರಿಗೆ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದ ಸೆರೆನಾ ವಿಲಿಯಮ್ಸ್‌

2018ರ ವಿಂಬಲ್ಡನ್‌ ಫೈನಲ್‌ನಲ್ಲಿ ಆ್ಯಂಜಿಲಿಕ್‌ ಕೆರ್ಬರ್‌ ವಿರುದ್ಧ ಸೋತಿದ್ದ ಸೆರೆನಾ

ಹಾಲೆಪ್
ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದ ರೊಮೇನಿಯಾದ ಮೊದಲ ಆಟಗಾರ್ತಿ ಹಾಲೆಪ್‌

2018ರಲ್ಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿದ್ದ ಸಿಮೋನಾ ಹಾಲೆಪ್‌

Follow Us:
Download App:
  • android
  • ios