ವಿಂಬಲ್ಡನ್‌ 2019: ಸೆಮಿಗೆ ಜೋಕೋವಿಚ್‌

ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ನೋವಾಕ್‌ ಜೋಕೋವಿಚ್‌ 9ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಪಂದ್ಯದ ಕುರಿತಾದ ಮಾಹಿತಿ ಇಲ್ಲಿದೆ ನೋಡಿ...

Wimbledon 2019 Novak Djokovic enters Semi Final

ಲಂಡನ್‌[ಜು.11]: 4 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 9ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂನ ಡೇವಿಡ್‌ ಗಾಫಿನ್‌ ವಿರುದ್ಧ 6-4, 6-0, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ ಜೋಕೋವಿಚ್‌, ವಿಂಬಲ್ಡನ್‌ ಟೂರ್ನಿಯಲ್ಲಿ ಒಟ್ಟಾರೆ 70ನೇ ಜಯ ಪಡೆದರು.

ವಿಂಬಲ್ಡನ್ 2019: ಸೆಮೀಸ್‌ಗೆ ಲಗ್ಗೆಯಿಟ್ಟ ಸೆರೆನಾ, ಹಾಲೆಪ್‌

ಪಂದ್ಯದ ಕೊನೆ 17 ಗೇಮ್‌ಗಳಲ್ಲಿ 15 ಅನ್ನು ಗೆದ್ದ ಜೋಕೋವಿಚ್‌, ನಿರಾಯಾಸವಾಗಿ ಸೆಮೀಸ್‌ಗೇರಿದರು. ಗ್ರ್ಯಾಂಡ್‌ಸ್ಲಾಂಗಳಲ್ಲಿ ಒಟ್ಟಾರೆ 36ನೇ ಬಾರಿಗೆ ಸೆಮೀಸ್‌ಗೇರಿರುವ ಜೋಕೋವಿಚ್‌, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕಾದಾಡಲು ಸ್ಪೇನ್‌ನ ಬಟಿಸ್ಟಾಅಗುಟ್‌ ವಿರುದ್ಧ ಸೆಣಸಲಿದ್ದಾರೆ.

ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 23ನೇ ಶ್ರೇಯಾಂಕಿತ ಆಟಗಾರ ಬಟಿಸ್ಟಾ, ಅರ್ಜೆಂಟೀನಾದ ಗಿಡೋ ಪೆಲ್ಲಾ ವಿರುದ್ಧ 7-5, 6-4, 3-6, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಅಂತಿಮ 4ರ ಸುತ್ತಿಗೆ ಪ್ರವೇಶ ಪಡೆದರು.

ಗುರುವಾರ ಮಹಿಳಾ ಸಿಂಗಲ್ಸ್‌ ಸೆಮೀಸ್‌ ನಡೆಯಲಿದ್ದು ಸೆರೆನಾ- ಸ್ಟ್ರೈಕೋವಾ, ಹಾಲೆಪ್‌-ಸ್ವಿಟೋಲಿನಾ ಸೆಣಸಲಿದ್ದಾರೆ.
 

Latest Videos
Follow Us:
Download App:
  • android
  • ios