Asianet Suvarna News Asianet Suvarna News

ಕೊಹ್ಲಿಯಿಂದ ಸಾಕಷ್ಟು ಕಲಿತಿದ್ದೇನೆ: ಕೇನ್ ವಿಲಿಯಮ್ಸನ್

Williamson expresses admiration for Kohli

ನವ​ದೆ​ಹ​ಲಿ(ಸೆ.13): ವಿಶ್ವದ ಅತ್ಯುತ್ತಮ ಬ್ಯಾಟ್ಸ್‌​ಮ​ನ್‌​ಗ​ಳ​ಲ್ಲೊ​ಬ್ಬ​ರೆಂಬ ಹಿರಿಮೆ ಗಳಿ​ಸಿ​ರುವ ನ್ಯೂಜಿಲೆಂಡ್‌ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿ​ಯ​ಮ್ಸನ್‌, ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ​ಯ​​ನ್ನು ಮನ​ಸಾರೆ ಹಾಡಿ ಹೊಗ​ಳಿ​ದ್ದಾರೆ.

ಇದೇ ತಿಂಗಳ 22ರಿಂದ ಆರಂಭ​ಗೊ​ಳ್ಳ​ಲಿ​ರುವ ಭಾರ​ತ ತಂಡದ ವಿರು​ದ್ಧದ ಟೆಸ್ಟ್‌ ಸರ​ಣಿ​ಗಾಗಿ ಇಲ್ಲಿಗೆ ಆಗ​ಮಿ​ಸಿ​ರುವ ಅವರು, ಮಂಗ​ಳ​ವಾರ ನಡೆದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ​ದರು.

‘‘ವಿರಾಟ್‌ ಒಬ್ಬ ಶ್ರೇಷ್ಠ ಆಟ​ಗಾರ. ಕ್ರಿಕೆ​ಟ್‌ನ ಮೂರೂ ಮಾದ​ರಿ​ಗ​ಳಲ್ಲಿ ಅವರು ತೋರುವ ಪ್ರದ​ರ್ಶನ ವಿಶೇಷ ಹಾಗೂ ಶ್ಲಾಘ​ನೀಯ. ಅವರ ಆಟ​ವನ್ನು ನೋಡು​ವು​ದೆಂದರೆ ನನಗೆ ಆನಂದ. ಅವರಾಡುವ ಸಂದರ್ಭವನ್ನು ವೀಕ್ಷಿಸುವ ಪ್ರತಿ ಸಂದರ್ಭದಲ್ಲಿಯೂ ಕೆಲ​ವಾರು ತಂತ್ರ​ಗಾ​ರಿ​ಕೆ​ಗ​ಳನ್ನು ಕಲಿ​ಯು​ತ್ತಿ​ರು​ತ್ತೇನೆ’’ ಎಂದರು.

ಪ್ರಸ್ತುತ ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ ಸಕ್ರಿ​ಯ​ವಾ​ಗಿ​ರುವ ಕ್ರಿಕೆ​ಟಿ​ಗ​ರ ಅತ್ಯು​ತ್ತಮ ಆಟ​ಗಾ​ರರ ಪಟ್ಟಿ​ಯಲ್ಲಿ ವಿರಾಟ್‌ ಕೊಹ್ಲಿ, ಜೋ ರೂಟ್‌, ಸ್ಟೀವ್‌ ಸ್ಮಿತ್‌ ಹಾಗೂ ಕೇನ್‌ ವಿಲಿ​ಯ​ಮ್ಸನ್‌ ಸ್ಥಾನ ಪಡೆ​ದಿ​ದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೇನ್‌, ‘‘ನಾವು ನಾಲ್ವರು ಅಗ್ರ​ ಬ್ಯಾ​ಟ್ಸ್‌​ಮ​ನ್‌​ಗಳೆಂಬ ಹಿರಿಮೆ ಗಳಿ​ಸಿ​ದ್ದರೂ, ಆಡುವ ಶೈಲಿ, ಅನುಸರಿಸುವ ತಂತ್ರಗಾರಿಕೆ ಮಾತ್ರ ಪರ​ಸ್ಪರ ಭಿನ್ನ. ನಮಗೆ ನಮ್ಮದೇ ಆದ ಪ್ರತ್ಯೇಕ ಗೇಮ್‌ ಪ್ಲಾನ್‌​ಗ​ಳಿವೆ’’ ಎಂದರು.

ಇದೇ ವೇಳೆ, ತಾನು ಉತ್ತಮ ಫಾರ್ಮ್ನ​ಲ್ಲಿ​ರು​ವು​ದಾಗಿ ತಿಳಿ​ಸಿದ ವಿಲಿಯಮ್ಸನ್‌, ನ್ಯೂಜಿ​ಲೆಂಡ್‌ ತಂಡದ ನಾಯ​ಕ​ನಾ​ಗಿ​ದ್ದರೂ ಬ್ಯಾಟಿಂಗ್‌ ಕಾಯ​ಕ​ವನ್ನು ಸಂತು​ಷ್ಟ​ದಿಂದ ನಿರ್ವ​ಹಿ​ಸು​ತ್ತಿ​ರು​ವು​ದಾಗಿ ತಿಳಿ​ಸಿ​ದರು.

 

Latest Videos
Follow Us:
Download App:
  • android
  • ios