Asianet Suvarna News Asianet Suvarna News

ಕುತೂಹಲ ಘಟ್ಟದಲ್ಲಿ ಲಂಕಾ-ವಿಂಡೀಸ್ ಟೆಸ್ಟ್..!

ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್’ಇಂಡಿಸ್ ಕೇವಲ 93 ರನ್’ಗಳಿಗೆ ಸರ್ವಪತನ ಕಂಡಿತು. ಬಳಿಕ ಗೆಲ್ಲಲು ಕೇವಲ 144 ರನ್’ಗಳ ಗುರಿ ಬೆನ್ನತ್ತಿದ ಲಂಕಾ ವಿಂಡೀಸ್ ನಾಯಕ ಹೋಲ್ಡರ್ ದಾಳಿಗೆ ದಿಢೀರ್ ಕುಸಿತ ಕಂಡಿದೆ.

Wickets tumble aplenty as the battle rages on

ಬಾರ್ಬಡೋಸ್[ಜೂ.26]: ಶ್ರೀಲಂಕಾ-ವೆಸ್ಟ್’ಇಂಡಿಸ್ ನಡುವಿನ ಹಗಲು ರಾತ್ರಿಯ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಮೂರನೇ ದಿನ ಮುಕ್ತಾಯದ ವೇಳೆಗೆ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಇದೀಗ ವೆಸ್ಟ್’ಇಂಡಿಸ್ ಸರಣಿ ಗೆಲ್ಲಲು ಲಂಕಾದ 5 ವಿಕೆಟ್’ಗಳ ಅವಶ್ಯಕತೆಯಿದ್ದರೆ, ಲಂಕಾ ಸರಣಿ ಸಮ ಮಾಡಿಕೊಳ್ಳಲು 63 ರನ್ ಬಾರಿಸಬೇಕಿದೆ.

ವಿಂಡಿಸ್ ನೀಡಿದ್ದ 144 ರನ್’ಗಳ ಗುರಿ ಬೆನ್ನತ್ತಿರುವ ಲಂಕಾ ತಂಡಕ್ಕೆ ಜೇಸನ್ ಹೋಲ್ಡರ್ ಮಾರಕವಾಗಿ ಪರಿಣಮಿಸಿದ್ದಾರೆ. ಕೇವಲ 21 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಲಂಕಾ ಗೆಲುವಿನ ಕನಸಿಗೆ ತಣ್ಣೀರು ಎರಚುವ ಮುನ್ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಗಂಭೀರವಾಗಿ ಗಾಯಗೊಂಡ ಲಂಕಾದ ಸ್ಟಾರ್ ಕ್ರಿಕೆಟಿಗ; ಮೈದಾನಕ್ಕೆ ಬಂದ ಆ್ಯಂಬುಲೆನ್ಸ್..!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್’ಇಂಡಿಸ್ ಮೊದಲ ಇನ್ನಿಂಗ್ಸ್’ನಲ್ಲಿ 210 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಲಂಕಾ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 154 ರನ್’ಗಳಿಗೆ ಸರ್ವಪತನ ಕಂಡಿತ್ತು. ವಿಂಡಿಸ್ ನಾಯಕ ಜೇಸನ್ ಹೋಲ್ಡರ್ 4 ವಿಕೆಟ್ ಕಬಳಿಸಿ ಲಂಕಾಗೆ ಮಾರಕವಾಗಿ ಪರಿಣಮಿಸಿದ್ದರು.

ಇನ್ನು ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್’ಇಂಡಿಸ್ ಕೇವಲ 93 ರನ್’ಗಳಿಗೆ ಸರ್ವಪತನ ಕಂಡಿತು. ಬಳಿಕ ಗೆಲ್ಲಲು ಕೇವಲ 144 ರನ್’ಗಳ ಗುರಿ ಬೆನ್ನತ್ತಿದ ಲಂಕಾ ವಿಂಡೀಸ್ ನಾಯಕ ಹೋಲ್ಡರ್ ದಾಳಿಗೆ ದಿಢೀರ್ ಕುಸಿತ ಕಂಡಿದೆ. 

ಶ್ರೀಲಂಕಾ ವೆಸ್ಟ್’ಇಂಡಿಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಎರಡನೇ ಪಂದ್ಯವನ್ನು ವೆಸ್ಟ್’ಇಂಡಿಸ್ ತಂಡ 226 ರನ್’ಗಳ ಜಯಭೇರಿ ಬಾರಿಸಿತ್ತು. ಇದೀಗ ಮೂರನೇ ಪಂದ್ಯ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 

Follow Us:
Download App:
  • android
  • ios