ಟ್ರೈನರ್‌'ಗಳ ಪರೀಕ್ಷೆಗೆ ಬಸು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದರು. ಆ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದ ಸೋಹಮ್‌'ಗೆ ಎನ್‌'ಸಿಎ ಟ್ರೈನರ್ ಹುದ್ದೆ ನೀಡಲಾಗಿದ್ದು, ಹೀಗಾಗಿ ಬಸು ಸ್ವಹಿತಾಸಕ್ತಿ ಸುಳಿಯಲ್ಲಿ ಸಿಲುಕಿದ್ದಾರೆ.

ಬೆಂಗಳೂರು(ಸೆ.16): ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಗೆ ಸೋಹಮ್ ದೇಸಾಯಿ ಅವರನ್ನು ಟ್ರೈನರ್ ಆಗಿ ನೇಮಕ ಮಾಡಿರುವುದರ ಹಿಂದೆ ಭಾರತ ಕ್ರಿಕೆಟ್ ತಂಡದ ಟ್ರೈನರ್ ಹಾಗೂ ವಿರಾಟ್ ಕೊಹ್ಲಿ ಆಪ್ತ ಶಂಕರ್ ಬಸು ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ.

ಎನ್'ಸಿಎ ಉಪ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಸೋಹಮ್, ಬಸು ನಡೆಸುವ ಜಿಮ್‌'ನಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆಯೇ ಗುಜರಾತ್ ರಣಜಿ ತಂಡದಲ್ಲಿಯೂ ಟ್ರೈನರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ನಡೆದ ಎನ್'ಸಿಎ ಟ್ರೈನರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎನ್'ಸಿಎದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ

ಆದರೆ ಟ್ರೈನರ್‌'ಗಳ ಪರೀಕ್ಷೆಗೆ ಬಸು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದರು. ಆ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದ ಸೋಹಮ್‌'ಗೆ ಎನ್‌'ಸಿಎ ಟ್ರೈನರ್ ಹುದ್ದೆ ನೀಡಲಾಗಿದ್ದು, ಹೀಗಾಗಿ ಬಸು ಸ್ವಹಿತಾಸಕ್ತಿ ಸುಳಿಯಲ್ಲಿ ಸಿಲುಕಿದ್ದಾರೆ.