ಹಾಗೆ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಅಂದ್ರೆ 73 ಪಂದ್ಯದಲ್ಲಿ ನಾಟೌಟ್ ಆದ ಸಾಧನೆ ಮಾಡಲು ಚಾನ್ಸ್ ಇದೆ.
ಶ್ರೀಲಂಕಾ ವಿರುದ್ಧದ ಪಂದ್ಯ ಮಹೇಂದ್ರ ಸಿಂಗ್ ಧೋನಿಗೆ 300ನೇ ಏಕದಿನ ಪಂದ್ಯವಾಗಿದೆ. ಈ ಮೂಲಕ 300 ಪಂದ್ಯವಾಡಿದ ಭಾರತದ 6ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇನ್ನು ಒಂಡೇ ಕ್ರಿಕೆಟ್ನಲ್ಲಿ 99 ಸ್ಟಂಪ್ ಔಟ್ ಮಾಡಿರುವ ಧೋನಿ, ಇವತ್ತು ನೂರು ಸ್ಟಂಪ್ ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಳ್ಳಲು ಅವಕಾಶವಿದೆ. ಹಾಗೆ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಅಂದ್ರೆ 73 ಪಂದ್ಯದಲ್ಲಿ ನಾಟೌಟ್ ಆದ ಸಾಧನೆ ಮಾಡಲು ಚಾನ್ಸ್ ಇದೆ.
ಭಾರತ-ಶ್ರೀಲಂಕಾ ನಡುವಿನ 4ನೇ ಏಕದಿನ ಪಂದ್ಯ ಕೊಲಂಬೋದಲ್ಲಿ ನಡೆಯುತ್ತಿದೆ. ಆಗ್ಲೇ ಸರಣಿ ಗೆದ್ದಿರುವ ಟೀಂ ಇಂಡಿಯಾ, ವೈಟ್ವಾಶ್ ಮೇಲೆ ಕಣ್ಣಿಟ್ಟಿದೆ. ಜೊತೆಗೆ ಪ್ರಯೋಗಗಳನ್ನೂ ಮಾಡಲಿದೆ. ಮೀಸಲು ಆಟಗಾರರಿಗೂ ಆಡಲು ಅವಕಾಶ ಕೊಡಲಿದೆ. ಆದ್ರೆ ಲಂಕಾ ಸ್ಥಿತಿ ಅದೋಗತಿಯಾಗಿದೆ. ಉಳಿದ ಎರಡು ಪಂದ್ಯ ಗೆದ್ದರಷ್ಟೇ ಲಂಕಾ 2019ರ ಒಂಡೇ ವರ್ಲ್ಡ್ಕಪ್ಗೆ ನೇರ ಅರ್ಹತೆ ಪಡೆಯಲಿದೆ. ಹೀಗಾಗಿ ಲಂಕನ್ನರು ಒತ್ತಡದಲ್ಲಿದ್ದಾರೆ.
