ನನ್ನ ಪತ್ನಿ ನತಾಷಳಿಗೂ ಮಣಿದಿರಲಿಲ್ಲ. ಆದರೆ ಐಪಿಎಲ್ ಜಾಹೀರಾತು ಚಿತ್ರೀಕರಣವೊಂದರಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದೇನೆ.

ಕೋಲ್ಕತಾ(ಏ.08): ಪತ್ನಿ ನತಾಷಳಿಂದಲೇ ತನ್ನ ಕೊಲೆಯಾಗುತ್ತಿತ್ತೆಂಬ ವಿನೋದದ ಸಂಗತಿಯೊಂದನ್ನು ಕೋಲ್ಕತಾ ನೈಟ್‌ರೈಡರ್ಸ್‌ (ಕೆಕೆಆರ್) ನಾಯಕ ಗೌತಮ್ ಗಂಭೀರ್ ಹಂಚಿಕೊಂಡಿದ್ದಾರೆ. ಕೆಕೆಆರ್‌ನ ವಿಶೇಷ ಸಂಚಿಕೆಯೊಂದರಲ್ಲಿ ಮಾತನಾಡಿರುವ ಗಂಭೀರ್ ‘‘ಬಟರ್ ಚಿಕ್ಕನ್, ದಾಲ್ ಇಷ್ಟಪಡುವ ಪಕ್ಕಾ ಪಂಜಾಬಿ ನಾನು. ನನಗೆ ಪಂಜಾಬಿ ಸಂಗೀತ ಇಷ್ಟ, ಆದರೆ ಡಿಜೆಗಳ ಅಬ್ಬರ ಅಂದರೆ ಆಗದು. ತಂಡದ ಮಾಲೀಕ ಶಾರುಖ್ ಖಾನ್ ಅಷ್ಟೇ ಅಲ್ಲ, ನನ್ನ ಪತ್ನಿ ನತಾಷಳಿಗೂ ಮಣಿದಿರಲಿಲ್ಲ. ಆದರೆ ಐಪಿಎಲ್ ಜಾಹೀರಾತು ಚಿತ್ರೀಕರಣವೊಂದರಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದೇನೆ. ಈ ವಿಷಯ ನನ್ನ ಮಡದಿಗೇನಾದರೂ ಗೊತ್ತಾದರೆ ನನ್ನನ್ನ ಕೊಂದರೂ ಆಶ್ಚರ್ಯವಿಲ್ಲ’’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.