ಬೆಂಗಳೂರು(ನ.15): ಕ್ರಿಕೆಟ್ ಒಂದು ಧರ್ಮವಾದರೆ, ಸಚಿನ್ ಅದಕ್ಕೆ ದೇವರು ಎನ್ನುವ ಮಾತನ್ನು ಕೇಳಿರುತ್ತೇವೆ. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಟ ಆಟಗಾರ ಟೆಸ್ಟ್'ಗೆ ಪಾದಾರ್ಪಣೆ ಮಾಡಿ ಇಂದಿಗೆ 27 ವರ್ಷ ತುಂಬಿದೆ. ನೂರು ಶತಕ ಸೇರಿದಂತೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್'ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯ ಹೊಂದಿರುವ ಮುಂಬೈಕರ್, ಕ್ರಿಕೆಟ್'ನ ಬಹುತೇಕ ದಾಖಲೆಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ತಮ್ಮ 16ನೇ ವಯಸ್ಸಿಗೆ ಟೆಸ್ಟ್ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಮಾಸ್ಟರ್ ಬ್ಲಾಸ್ಟರ್, ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗಿಳಿದು 15 ರನ್ ಗಳಿಸಿದ್ದರು.. ಈ ಅಪರೂಪದ ವಿಡಿಯೋ ನಿಮಗಾಗಿ,,. ನೋಡಿ ಎಂಜಾಯ್ ಮಾಡಿ...