2008ರಲ್ಲಿ ವೃತ್ತಿಬದುಕಿಗೆ ವಿದಾಯ ಹೇಳುವಾಗ ಕುಂಬ್ಳೆ ಆಡಿದ ಮಾತುಗಳು ತನ್ನನ್ನು ಭಾವುಕನನ್ನಾಗಿ ಮಾಡಿದವು ಎಂದು ಸಚಿನ್ ಹೇಳಿಕೊಂಡಿದ್ದಾರೆ.
ನವದೆಹಲಿ(ಫೆ.23): ಸಚಿನ್ ತೆಂಡೂಲ್ಕರ್ ಹಾಗೂ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ದಿಗ್ಗಜರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಿಸುಮಾರು ಎರಡು ದಶಕಗಳ ಕಾಲ ಒಟ್ಟಿಗೆ ದೇಶವನ್ನು ಪ್ರತಿನಿಧಿಸಿದ ಸಚಿನ್ ಹಾಗೂ ಕುಂಬ್ಳೆ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಭಾರತದ ಪ್ರಭಾವಿ ಲೆಗ್'ಸ್ಪಿನ್ನರ್ ಕುಂಬ್ಳೆ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಮಾನಸಿಕವಾಗಿ ಕಣ್ಣೀರು ಬರುವಂತೆ ಮಾಡಿದ್ದರು ಎಂದು ಸಚಿನ್ ತನ್ನ ಆತ್ಮಚರಿತ್ರೆ ‘ಪ್ಲೆಯಿಂಗ್ ಇಟ್ ಮೈ ವೇ’ ಕೃತಿಯಲ್ಲಿ ಬರೆದುಕೊಂಡಿದ್ದಾರೆ.
2008ರಲ್ಲಿ ವೃತ್ತಿಬದುಕಿಗೆ ವಿದಾಯ ಹೇಳುವಾಗ ಕುಂಬ್ಳೆ ಆಡಿದ ಮಾತುಗಳು ತನ್ನನ್ನು ಭಾವುಕನನ್ನಾಗಿ ಮಾಡಿದವು ಎಂದು ಸಚಿನ್ ಹೇಳಿಕೊಂಡಿದ್ದಾರೆ.
‘‘ದೆಹಲಿಯಲ್ಲಿ ಕೊನೆಯ ಟೆಸ್ಟ್ ಆಡಿದ ಕುಂಬ್ಳೆ, ನಿವೃತ್ತಿಯ ಮಾತುಗಳನ್ನಾಡುವಾಗ ಎರಡು ದಶಕಗಳ ಕಾಲದ ಜತೆ ಪಯಣವನ್ನು ನೆನೆದು ಇಡೀ ತಂಡ ಭಾವುಕವಾಗಿತ್ತು. ನಾನಂತೂ ಆ ಸಂದರ್ಭದಲ್ಲಿ ಭಾವನಾತ್ಮಕವಾಗಿ ನಲುಗಿಹೋಗಿದ್ದೆ. ಅವರು ನಿವೃತ್ತಿ ತೆಗೆದುಕೊಳ್ಳುತ್ತೇನೆಂದು ನನ್ನ ಬಳಿ ಹೇಳಿದಾಗ ನಾನು ನಂಬಲೇ ಇಲ್ಲ’’ ಎಂದು ಸಚಿನ್ ತಿಳಿಸಿದ್ದಾರೆ.
