ಈ ಪಂದ್ಯ ಗೆಲ್ಲುವ ತಂಡಕ್ಕೆ ವಿಶ್ವಕಪ್ ಅರ್ಹತೆ ದೊರೆಯಲಿದೆ ಎನ್ನುವುದು ಮೊದಲೇ ನಿಗದಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 198 ರನ್‌'ಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ 35.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊಳಿಸಲಾಯಿತು. ಈ ವೇಳೆ ಸ್ಕಾಟ್ಲೆಂಡ್ ನಿಗದಿತ ಮೊತ್ತಕ್ಕಿಂತ 5 ರನ್ ಕಡಿಮೆ ಗಳಿಸಿದ್ದರಿಂದ ಸೋಲುಂಡು, ವಿಶ್ವಕಪ್‌'ಗೆ ಅರ್ಹತೆ ಗಿಟ್ಟಿಸುವ ಅವಕಾಶದಿಂದ ವಂಚಿತವಾಯಿತು.

ಹರಾರೆ(ಮಾ.22): ಮುಂದಿನ ವರ್ಷ ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌'ಗೆ 2 ಬಾರಿ ಚಾಂಪಿಯನ್ ವೆಸ್ಟ್‌ಇಂಡೀಸ್ ಅರ್ಹತೆ ಪಡೆದುಕೊಂಡಿದೆ. ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದ ತನ್ನ ಅಂತಿಮ ಪಂದ್ಯದಲ್ಲಿ, ಸ್ಕಾಟ್ಲೆಂಡ್ ವಿರುದ್ಧ ವಿಂಡೀಸ್ ಡಕ್ವರ್ತ್ ಲೂಯಿಸ್ ನಿಯಮದನ್ವಯ 5 ರನ್‌'ಗಳ ರೋಚಕ ಗೆಲುವು ಸಾಧಿಸಿತು.

ಈ ಪಂದ್ಯ ಗೆಲ್ಲುವ ತಂಡಕ್ಕೆ ವಿಶ್ವಕಪ್ ಅರ್ಹತೆ ದೊರೆಯಲಿದೆ ಎನ್ನುವುದು ಮೊದಲೇ ನಿಗದಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 198 ರನ್‌'ಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ 35.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊಳಿಸಲಾಯಿತು. ಈ ವೇಳೆ ಸ್ಕಾಟ್ಲೆಂಡ್ ನಿಗದಿತ ಮೊತ್ತಕ್ಕಿಂತ 5 ರನ್ ಕಡಿಮೆ ಗಳಿಸಿದ್ದರಿಂದ ಸೋಲುಂಡು, ವಿಶ್ವಕಪ್‌'ಗೆ ಅರ್ಹತೆ ಗಿಟ್ಟಿಸುವ ಅವಕಾಶದಿಂದ ವಂಚಿತವಾಯಿತು. ಮಾಜಿ ಚಾಂಪಿಯನ್ ವಿಂಡೀಸ್ ಅರ್ಹತೆ ಪಡೆಯುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸಿದರು. ಕೆರಿಬಿಯನ್ನರು ಇಲ್ಲದೆ ವಿಶ್ವಕಪ್ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯಿಸಿದರು.

Scroll to load tweet…

ಒಂದು ಸ್ಥಾನಕ್ಕೆ 4 ತಂಡಗಳ ಪೈಪೋಟಿ

ಅರ್ಹತಾ ಸುತ್ತಿನಿಂದ ಒಟ್ಟು 2 ತಂಡಗಳಿಗೆ ವಿಶ್ವಕಪ್‌'ಗೆ ಪ್ರವೇಶಿಸಲು ಅವಕಾಶವಿದ್ದು, ವಿಂಡೀಸ್ ಮೊದಲ ತಂಡವಾಗಿ ಹೊರಹೊಮ್ಮಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಜಿಂಬಾಬ್ವೆ, ಯುಎಇ, ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ಪೈಪೋಟಿಯಲ್ಲಿವೆ. ಯುಎಇ ವಿರುದ್ಧ ಜಿಂಬಾಬ್ವೆ ಗೆದ್ದರೆ, ವಿಶ್ವಕಪ್‌'ಗೆ ಅರ್ಹತೆ ಪಡೆಯಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ನೆಟ್ ರನ್ ರೇಟ್ ಆಧಾರದ ಮೇಲೆ ೨ನೇ ತಂಡ ಯಾವುದು ಎನ್ನುವುದು ನಿರ್ಧಾರವಾಗಲಿದೆ. ಜಿಂಬಾಬ್ವೆ ಸೋತರೆ, ಐರ್ಲೆಂಡ್ ಹಾಗೂ ಆಫ್ಘಾನಿಸ್ತಾನ ಪಂದ್ಯದಲ್ಲಿ ಗೆಲ್ಲುವ ತಂಡ ವಿಶ್ವಕಪ್‌'ಗೆ ಅರ್ಹತೆ ಪಡೆಯಲಿದೆ.