2009ರಲ್ಲಿ ಲಾಹೋರ್‌'ನಲ್ಲಿ ನಡೆದ ಶ್ರೀಲಂಕಾ ತಂಡದ ಮೇಲಿನ ಉಗ್ರರ ದಾಳಿಯ ನಂತರ ಪಾಕ್ ನೆಲದಲ್ಲಿ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದಿಲ್ಲ.

ಕರಾಚಿ(ಜ.06): ಸುಮಾರು ಏಳು ವರ್ಷಗಳ ನಂತರ ಪಾಕ್ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ನಡೆಯಲು ವೇದಿಕೆ ಸಜ್ಜಾದಂತೆ ಕಂಡುಬರುತ್ತಿದೆ.

ಈ ತಿಂಗಳಾಂತ್ಯಕ್ಕೆ ವಿಂಡೀಸ್ ಭದ್ರತಾ ನಿಯೋಗ ಪಾಕ್‌'ಗೆ ಭೇಟಿ ನೀಡಿ ಪಾಕಿಸ್ತಾನ ಸರ್ಕಾರ ಕೈಗೊಂಡಿರುವ ಭದ್ರತೆಯ ಕುರಿತು ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

2009ರಲ್ಲಿ ಲಾಹೋರ್‌'ನಲ್ಲಿ ನಡೆದ ಶ್ರೀಲಂಕಾ ತಂಡದ ಮೇಲಿನ ಉಗ್ರರ ದಾಳಿಯ ನಂತರ ಪಾಕ್ ನೆಲದಲ್ಲಿ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದಿಲ್ಲ.

ಪಾಕಿಸ್ತಾನದಲ್ಲಿ 2 ರಿಂದ 3 ಟಿ20 ಪಂದ್ಯಗಳನ್ನಾಡುವುದಕ್ಕೆ ವಿಂಡೀಸ್ ತಂಡವನ್ನು ಆಹ್ವಾನಿಸಲಾಗಿದೆ ಎಂದು ಪಿಸಿಬಿ ಹಿರಿಯ ಅಧಿಕಾರಿ ನಜಾಮ್ ಸೇಥಿ ಹೇಳಿದ್ದು, ಇದಕ್ಕೂ ಮುನ್ನ ಐಸಿಸಿಯ ವಿಶೇಷ ಅಧಿಕಾರಿ ಗಿಲೇಸ್ ಕ್ಲಾರ್ಕ್ ಜ.27ಕ್ಕೆ ಲಾಹೋರ್‌'ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.