ಇದೇ ತಿಂಗಳ ಅಂತ್ಯದ ವೇಳೆ ಪಾಕಿಸ್ತಾನದಲ್ಲಿ ಪಾಕ್ ತಂಡದ ವಿರುದ್ಧ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡುವಂತೆ ವಿಂಡೀಸ್ ಕ್ರಿಕೆಟ್ ತಂಡಕ್ಕೆ ಪಿಸಿಬಿ ಅಧಿಕಾರಿಗಳು ಆಹ್ವಾನ ನೀಡಿದ್ದರು.

ಆಂಟಿಗುವಾ(ಜ.13): ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೀಡಿದ್ದ ಆಹ್ವಾನವನ್ನು ವೆಸ್ಟ್‌'ಇಂಡೀಸ್ ಕ್ರಿಕೆಟ್ ಮಂಡಳಿ ಭದ್ರತೆಯ ನೆಪವೊಡ್ಡಿ ತಿರಸ್ಕರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ತಿಂಗಳ ಅಂತ್ಯದ ವೇಳೆ ಪಾಕಿಸ್ತಾನದಲ್ಲಿ ಪಾಕ್ ತಂಡದ ವಿರುದ್ಧ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡುವಂತೆ ವಿಂಡೀಸ್ ಕ್ರಿಕೆಟ್ ತಂಡಕ್ಕೆ ಪಿಸಿಬಿ ಅಧಿಕಾರಿಗಳು ಆಹ್ವಾನ ನೀಡಿದ್ದರು.

ಇದಕ್ಕಾಗಿ ವಿಂಡೀಸ್ ಮಂಡಳಿ ಭದ್ರತಾ ತಪಾಸಣೆಗಾಗಿ ಅಧಿಕಾರಿಗಳ ತಂಡವೊಂದನ್ನು ಪಾಕ್‌'ಗೆ ಕಳುಹಿಸುವ ಯೋಚನೆಯಲ್ಲಿತ್ತು. ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಎಫ್‌ಐಸಿಎ)ಯ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಸದ್ಯಕ್ಕೆ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವಷ್ಟು ಅಲ್ಲಿನ ಭದ್ರತಾ ವ್ಯವಸ್ಥೆ ಪೂರಕವಾಗಿಲ್ಲ ಎಂದು ಹೇಳಿತ್ತು.