ಜಮೈಕ(ಜ.05): ವೆಸ್ಟ್ ಇಂಡೀಸ್ ತಂಡ ಮಧ್ಯಂತರ ಕೋಚ್ ಆಗಿ ಇಂಗ್ಲೆಂಡ್ ಕೋಚ್ ರಿಚರ್ಡ್ ಅಲೆಕ್ಸಾಂಡರ್ ಪೆಬಸ್ ಅವರನ್ನ ನೇಮಕ ಮಾಡಿದೆ. 2018ರ ಸೆಪ್ಟೆಂಬರ್‌ನಲ್ಲಿ ವಿಂಡೀಸ್ ಮುಖ್ಯ ಕೋಚ್ ಸ್ಟುವರ್ಟ್ ಲಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಹಂಗಾಮಿ, ಮಧ್ಯಂತರ ಕೋಚ್ ಆಯ್ಕೆ ಮಾಡಿದ್ದ ವಿಂಡೀಸ್ ಇದೀಗ ಇಂಗ್ಲೆಂಡ್ ವಿರುದ್ದದ ತವರಿನ ಸರಣಿಗಾಗಿ ನೂತನ ಕೋಚ್ ಆಯ್ಕೆ ಮಾಡಿದೆ.

ಇದನ್ನೂ ಓದಿ: ಏಕದಿನದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಐವರು ಕ್ರಿಕೆಟಿಗರು!

ನೂತನ ಕೋಚ್ ರಿಚರ್ಡ್ 2019ರ ವಿಶ್ವಕಪ್ ಟೂರ್ನಿವರೆಗೂ  ವಿಂಡೀಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು  ವೆಸ್ಟ್ಇಂಡೀಸ್ ಕ್ರಿಕೆಟ್  ಮಂಡಳಿ ಹೇಳಿದೆ.  ಇಂಗ್ಲೆಂಡ್ ವಿರುದ್ಧ ತವರಿನ ಸರಣಿಗೆ ತಂಡವನ್ನ ಸಜ್ಜುಗೊಳಿಸಬೇಕಿದೆ. ಇಂಗ್ಲೆಂಡ್ ಬಲಿಷ್ಠ ತಂಡ, ಟೆಸ್ಟ್ ಕ್ರಿಕೆಟ್‌ನಲ್ಲಿ ನಮಗೆ ಸವಾಲು ಎದುರಾಗಲಿದೆ. ಇದಕ್ಕೆಲ್ಲಾ ತಯಾರಿ ನಡೆಸಬೇಕಿದೆ ಎಂದು ನೂತನ ಕೋಚ್ ರಿಚರ್ಡ್ ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019: ಯಾವ ತಂಡದಲ್ಲಿದ್ದಾರೆ ಉತ್ತಮ ವಿಕೆಟ್ ಕೀಪರ್?

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಸೌತ್ಆಫ್ರಿಕಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿರುವ ರಿಚರ್ಡ್ ಇದೀಗ ವೆಸ್ಟ್ ಇಂಡೀಸ್ ತಂಡದ ಜವಾಬ್ದಾರಿ ಹೊತ್ತಿದ್ದಾರೆ. ಈ ಮೂಲಕ ವಿಂಡೀಸ್ ಗತವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.