ಬೆಳ್ಳಿ ಗೆದ್ದ ಗುರುರಾಜ್'ಗೆ ರಾಜ್ಯ ಸರ್ಕಾರದಿಂದ ಬಂಪರ್ ಬಹುಮಾನ

Weightlifter Gururaj Poojary Soon gets Govt Job says Karnataka Sports minister
Highlights

ಆಸ್ಟ್ರೇಲಿಯಾದ ಗೋಲ್ಡ್​​ಕೋಸ್ಟ್​ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್’ನಲ್ಲಿ 56 ಕೆಜಿ ಪುರುಷರ ವಿಭಾಗದ ವೇಯ್ಟ್​​​ಲಿಫ್ಟಿಂಗ್​​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿದ್ದರು.

ಉಡುಪಿ(ಏ.07): ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಕುಂದಾಪುರದ ಗುರುರಾಜ್ ಪೂಜಾರಿ ಅವರಿಗೆ ಸರ್ಕಾರದಿಂದ ₹25 ಲಕ್ಷ ಬಹುಮಾನ ಮತ್ತು ಸರ್ಕಾರಿ ಉದ್ಯೋಗ ದೊರಕಲಿದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ರಾಜ್ಯದಲ್ಲಿ ಕ್ರೀಡಾನೀತಿಈಗಾಗಲೇ ಘೋಷಣೆ ಮಾಡಲಾಗಿದ್ದು, ಅದರನ್ವಯ ಸರ್ಕಾರದ ನೇಮಕಾತಿಯಲ್ಲೂ ಸಾಧಕ ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗಿದೆ. ಸಾಧಕ ಕ್ರೀಡಾಪಟುಗಳಿಗೆ ಬಹುಮಾನ ನೀಡುವುದಕ್ಕಾಗಿಯೇ ₹48 ಕೋಟಿ ಮೀಸಲಿಡಲಾಗಿದೆ. ಕ್ರೀಡಾನೀತಿಯಂತೆ ಗುರುರಾಜ್ ಅವರಿಗೆ ಬಹುಮಾನ ಮತ್ತು ಸರ್ಕಾರಿ ಉದ್ಯೋಗ ದೊರೆಯಲಿದೆ ಎಂದು ಸುದ್ದಿಗಾರರಿಗೆ ಸಚಿವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಗೋಲ್ಡ್​​ಕೋಸ್ಟ್​ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್’ನಲ್ಲಿ 56 ಕೆಜಿ ಪುರುಷರ ವಿಭಾಗದ ವೇಯ್ಟ್​​​ಲಿಫ್ಟಿಂಗ್​​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿದ್ದರು.

loader