Asianet Suvarna News Asianet Suvarna News

ಪ್ಲೇ-ಆಫ್ ಪ್ರವೇಶಿಸಲು ಇನ್ನು ಅವಕಾಶವಿದೆ

. ನಮಗೆ ಇನ್ನೂ 3 ಪಂದ್ಯಗಳು ಬಾಕಿ ಇವೆ. ಲೆಕ್ಕಾಚಾರದ ಪ್ರಕಾರ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ ಎಂದಿದ್ದಾರೆ.

We can still make the play offs says Zaheer Khan
  • Facebook
  • Twitter
  • Whatsapp

ನವದೆಹಲಿ(ಮೇ.07): ಪ್ರಸಕ್ತ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ-ಆಫ್ ಹಂತ ಪ್ರವೇಶಿಸಲು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಇನ್ನು ಅವಕಾಶವಿದೆ ಎಂದು ತಂಡದ ನಾಯಕ ಜಹೀರ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ ಇನ್ನೂ 3 ಪಂದ್ಯಗಳು ಬಾಕಿ ಇವೆ. ಲೆಕ್ಕಾಚಾರದ ಪ್ರಕಾರ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ ಎಂದಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ 4ರಲ್ಲಿ ಜಯಿಸಿ, 7ರಲ್ಲಿ ಸೋಲುಂಡಿರುವ ಡೆಲ್ಲಿ ಅಂಕಪಟ್ಟಿಯಲ್ಲಿ ಸದ್ಯ 6ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ 146 ರನ್‌ಗಳ ಹೀನಾಯ ಸೋಲು ಕಂಡಿತು. ನೀವು ಯಾವಾಗಲೂ ಅಂಕಪಟ್ಟಿ ಕುರಿತು ಮಾತನಾಡುವಿರಿ, ಅದಕ್ಕಿಂತ ಮೊದಲು ಗೆಲ್ಲಬೇಕು. ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ನಾವು ಮರು ಸಂಘಟಿತರಾಗಬೇಕು. ನಮಗೆ 3 ದಿನಗಳ ವಿಶ್ರಾಂತಿ ಇದ್ದು, ಬಲಿಷ್ಠವಾಗಿ ಹಿಂದಿರುಗಬೇಕು ಎಂದು ಜಹೀರ್ ಹೇಳಿದ್ದಾರೆ.         

Follow Us:
Download App:
  • android
  • ios