ಇದು ಬಿಸಿಸಿಐ ಹಮ್ಮಿಕೊಳ್ಳುವ ಏಕದಿನ, ಟೆಸ್ಟ್ ಹಾಗೂ ಟಿ20 ಸಹ ಒಳಗೊಂಡಿವೆ.
ಬೆಂಗಳೂರು(ಜೂ.30): ನಾಳೆಯಿಂದ ಜಾರಿಗೊಳ್ಳುವ ಏಕರೂಪ ತೆರಿಗೆ ಜಿಎಸ್'ಟಿ'ಯಿಂದ ಲೈವ್ ಕ್ರಿಕೆಟ್ ಮ್ಯಾಚ್ ನೋಡುವವರಿಗೆ ಕಾದಿದೆ ಶಾಕ್.
ಜುಲೈ 1ರಿಂದ ದೇಶಾದ್ಯಂತ ಜಾರಿಗೊಳ್ಳುವ ಒಂದು ದೇಶ ಒಂದು ತೆರಿಗೆಗೆ ಐಪಿಎಲ್'ನಂಥ ಕ್ಲಬ್ ಕಲ್ಚರ್ ರೀತಿಯ ಕ್ರಿಕೆಟ್ ಪಂದ್ಯಗಳನ್ನು ನೋಡುವವರಿಗೆ ಶೇ.28 ಹೆಚ್ಚುವರಿ ತೆರಿಗೆಯ ಹೊರೆ ಬೀಳಲಿದೆ. ಇದು ಬಿಸಿಸಿಐ ಹಮ್ಮಿಕೊಳ್ಳುವ ಏಕದಿನ, ಟೆಸ್ಟ್ ಹಾಗೂ ಟಿ20 ಸಹ ಒಳಗೊಂಡಿವೆ.
ಭಾರತೀಯ ಕ್ರಿಕೆಟ್ ಮಂಡಳಿ ಅಥವಾ ಹಾಕಿ ಫೆಡರೇಷನ್ ಹಮ್ಮಿಕೊಳ್ಳುವ ಎಲ್ಲ ರೀತಿಯ ಕ್ರೀಡೆಗಳ ಟಿಕೆಟ್'ಗಳ ಬೆಲೆಯಲ್ಲಿ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ 250 ರೂ.ಗಿಂತ ಕಡಿಮೆಯಿರುವ ಟಿಕೆಟ್'ಗಳಿಗೆ ತೆರಿಗೆಯಿಂದ ಪೂರ್ಣ ವಿನಾಯಿತಿ ನೀಡಲಾಗಿದೆ. ಇಲ್ಲಿಯವರೆಗೂ ಕರ್ನಾಟಕ ಸರ್ಕಾರ ಐಪಿಎಲ್ ರೀತಿಯ ಕ್ರಿಕೆಟ್ ಪಂದ್ಯಗಳಿಗೆ ಮನರಂಜನೆ ತೆರಿಗೆ ಶೇ.10, ಸೇವಾ ತೆರಿಗೆ ಶೇ.25 ವಿಧಿಸುತ್ತಿತ್ತು. ಜಿಎಸ್ಟಿಯಿಂದ ಶೇ.3 ಹೆಚ್ಚಾಗಿದೆ.
