ಈಗಾಗಲೇ ಮೊದಲ ಟೆಸ್ಟ್ ಸೋತಿರುವ ಭಾರತ ತಂಡ ಸರಣಿ ಜೀವಂತವಾಗಿಟ್ಟುಕೊಳ್ಳಬೇಕೆಂದರೆ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ವಿರಾಟ್ ಪಡೆ ಜಯಿಸಲೇಬೇಕಿದೆ. ಆದರೆ ಎಡಬಿಡದೇ ಸುರಿದ ಮಳೆ ಮೊದಲ ದಿನದ ಪಂದ್ಯವನ್ನು ಆಹುತಿ ತೆಗೆದುಕೊಂಡಿತು.
ಲಾರ್ಡ್ಸ್[ಆ.09]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಮೊದಲ ದಿನ ಮಳೆಗೆ ಆಹುತಿಯಾಗಿದ್ದು, ಒಂದೂ ಎಸೆತ ಕಾಣದೆ ಕೊನೆಗೊಂಡಿದೆ.
ಈಗಾಗಲೇ ಮೊದಲ ಟೆಸ್ಟ್ ಸೋತಿರುವ ಭಾರತ ತಂಡ ಸರಣಿ ಜೀವಂತವಾಗಿಟ್ಟುಕೊಳ್ಳಬೇಕೆಂದರೆ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ವಿರಾಟ್ ಪಡೆ ಜಯಿಸಲೇಬೇಕಿದೆ. ಆದರೆ ಎಡಬಿಡದೇ ಸುರಿದ ಮಳೆ ಮೊದಲ ದಿನದ ಪಂದ್ಯವನ್ನು ಆಹುತಿ ತೆಗೆದುಕೊಂಡಿತು.
2001ರಲ್ಲೂ ಇದೇ ರೀತಿ ಲಾರ್ಡ್ಸ್’ನಲ್ಲಿ ಮೊದಲ ದಿನದ ಪಂದ್ಯ ಮಳೆಗೆ ಆಹುತಿಯಾಗಿತ್ತು. ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನ ಒಂದೂ ಎಸೆತ ಕಾಣದೇ ಮುಕ್ತಾಯವಾಗಿತ್ತು.