RCB ಪಾಲಾದ ವಾಷಿಂಗ್ಟನ್ ಸುಂದರ್ ಹೇಳಿದ್ದೇನು ಗೊತ್ತಾ..?

First Published 28, Jan 2018, 5:59 PM IST
Washington Sundar Says Its A Dream Come True To Play With Virat Kohli
Highlights

ಆರ್'ಸಿಬಿ ನನ್ನನ್ನು ಆರಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ನಾನು ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ದೊಡ್ಡ ಅಭಿಮಾನಿ. ವಿರಾಟ್ ಕೊಹ್ಲಿ ಅವರೊಂದಿಗೆ ಆಡಬೇಕೆಂಬ ನನ್ನ ಕನಸು ಕೊನೆಗೂ ನನಸಾಗಿದೆ ಎಂದು ತಮಿಳುನಾಡು ಮೂಲದ ಆಲ್ರೌಂಡರ್ ಹೇಳಿದ್ದಾರೆ.

ಐಪಿಎಲ್ ಆಟಗಾರರ ಹರಾಜಿನಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 3.3 ಕೋಟಿ ರುಪಾಯಿಗೆ ಖರೀದಿಸಿದೆ. ಆರ್'ಸಿಬಿಗೆ ಆಯ್ಕೆಯಾದ ಬೆನ್ನಲ್ಲೇ ಸುಂದರ್ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್'ಸಿಬಿಯೊಂದಿಗೆ ಆಡಲು ತುದಿಗಾಲಿನಲ್ಲಿ ನಿಂತಿರುವುದಾಗಿ ಹೇಳಿದ್ದಾರೆ.

ಆರ್'ಸಿಬಿ ನನ್ನನ್ನು ಆರಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ನಾನು ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ದೊಡ್ಡ ಅಭಿಮಾನಿ. ವಿರಾಟ್ ಕೊಹ್ಲಿ ಅವರೊಂದಿಗೆ ಆಡಬೇಕೆಂಬ ನನ್ನ ಕನಸು ಕೊನೆಗೂ ನನಸಾಗಿದೆ ಎಂದು ತಮಿಳುನಾಡು ಮೂಲದ ಆಲ್ರೌಂಡರ್ ಹೇಳಿದ್ದಾರೆ.

ಕಳೆದ ವರ್ಷ ಪುಣೆ ಸೂಪರ್'ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಸುಂದರ್, ಎಂ.ಎಸ್ ಧೋನಿ ಅವರೊಂದಿಗೆ ಆಡಿದ್ದು ನನ್ನ ಪಾಲಿಗೆ ಅವಿಸ್ಮರಣೀಯ ಕ್ಷಣ. ಈಗ ವಿರಾಟ್ ಕೊಹ್ಲಿ ಅವರಿಂದ ಸಾಕಷ್ಟು ಕಲಿಯುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

loader