ಎರಡನೇ ದಿನದಲ್ಲಿ ಬಾಂಗ್ಲಾ ಪಡೆ 52 ರನ್ ಸೇರಿಸಿ 305 ರನ್'ಗಳಿಗೆ ಸರ್ವಪತನ ಕಂಡಿತು. ಆಸೀಸ್ ಪರ ಲಯಾನ್ 94/7 ವಿಕೆಟ್ ಪಡೆದು ಮಿಂಚಿದರು.

ಚಿತ್ತಗಾಂಗ್(ಸೆ.05): ನಾಥನ್ ಲಯಾನ್ ಆಕರ್ಷಕ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ಮತ್ತು ಪೀಟರ್ ಹ್ಯಾಂಡ್ಸ್'ಕಂಬ್ ಅಜೇಯ ಅರ್ಧಶತಕಗಳ ನೆರವಿನಿಂದ ಎರಡನೇ ದಿನ ಆಸ್ಟ್ರೇಲಿಯಾ ತಂಡವು ಕಮ್'ಬ್ಯಾಕ್ ಮಾಡುವಲ್ಲಿ ಸಫಲವಾಗಿದೆ.

ಇಲ್ಲಿನ ಜಹರ್ ಅಹಮದ್ ಚೌಧರಿ ಕ್ರೀಡಾಂಗಣದಲ್ಲಿ ಮೊದಲನೇ ದಿನ 253/6 ಕಲೆಹಾಕಿದ್ದ ಬಾಂಗ್ಲಾದೇಶಕ್ಕೆ ಸ್ಪಿನ್ನರ್ ನಾಥನ್ ಲಯನ್ ಮತ್ತೆ ಕಂಠಕವಾಗಿ ಪರಿಣಮಿಸಿದರು. ಎರಡನೇ ದಿನದಲ್ಲಿ ಬಾಂಗ್ಲಾ ಪಡೆ 52 ರನ್ ಸೇರಿಸಿ 305 ರನ್'ಗಳಿಗೆ ಸರ್ವಪತನ ಕಂಡಿತು. ಆಸೀಸ್ ಪರ ಲಯಾನ್ 94/7 ವಿಕೆಟ್ ಪಡೆದು ಮಿಂಚಿದರು.

ಇನ್ನು ಮೊದಲನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಮ್ಯಾಟ್ ರೆನ್'ಶೋ 4 ರನ್ ಗಳಿಸಿ ಮುಸ್ತಫಿಜುರ್'ಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ತಂಡದ ಮೊತ್ತ 98 ರನ್ ಆಗಿದ್ದಾಗ 58 ರನ್ ಗಳಿಸಿದ್ದ ಸ್ಮಿತ್ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್'ಗೆ ಮುರಿಯದ ಶತಕದ ಜತೆಯಾಟವಾಡಿದ ಡೇವಿಡ್ ವಾರ್ನರ್(88) ಹಾಗೂ ಪೀಟರ್ ಹ್ಯಾಂಡ್ಸ್ಕಂಬ್(69) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ: 305/10

ಮುಷ್ಫೀಕರ್ ರಹೀಮ್ : 68

ಶಬ್ಬೀರ್ ರೆಹಮಾನ್ : 66

ನಾಥನ್ ಲಯಾನ್ :94/7

ಆಸ್ಟ್ರೇಲಿಯಾ : 225/2

ಡೇವಿಡ್ ವಾರ್ನರ್ : 88*

ಪೀಟರ್ ಹ್ಯಾಂಡ್ಸ್'ಕಂಬ್ : 69*