ರಾಜಸ್ಥಾನ ತಂಡದಲ್ಲಿ ಶೇನ್ ವಾರ್ನ್'ಗೆ ಪ್ರಮುಖ ಸ್ಥಾನ

First Published 14, Feb 2018, 6:17 PM IST
Warne returns to Royals as mentor
Highlights

ಐಪಿಎಲ್‌ನ ಚೊಚ್ಚಲ ಆವೃತ್ತಿ(2008)ಯಲ್ಲಿ ರಾಜಸ್ಥಾನ ತಂಡದ ನಾಯಕ ಹಾಗೂ ಕೋಚ್ ಆಗಿದ್ದ ವಾರ್ನ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ನವದೆಹಲಿ(ಫೆ.14): 2 ವರ್ಷಗಳ ಬಳಿಕ ಐಪಿಎಲ್‌ಗೆ ವಾಪಸಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ನೂತನ ಸಲಹೆಗಾರ (ಮೆಂಟರ್) ಆಗಿ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೇಮಕಗೊಂಡಿದ್ದಾರೆ.

ಐಪಿಎಲ್‌ನ ಚೊಚ್ಚಲ ಆವೃತ್ತಿ(2008)ಯಲ್ಲಿ ರಾಜಸ್ಥಾನ ತಂಡದ ನಾಯಕ ಹಾಗೂ ಕೋಚ್ ಆಗಿದ್ದ ವಾರ್ನ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಕಳೆದ ವಾರವಷ್ಟೇ ವಾರ್ನ್, ತಾವು ಐಪಿಎಲ್ ತಂಡವೊಂದರಲ್ಲಿ ಪ್ರಮುಖ ಹುದ್ದೆ ನಿರ್ವಹಿಸುವುದಾಗಿ ಸುಳಿವು ನೀಡಿದ್ದರು. ಮೆಂಟರ್ ಆಗಿ ನೇಮಕಗೊಂಡ ಬಳಿಕ ಟ್ವೀಟರ್‌ನಲ್ಲಿ ವಾರ್ನ್, ‘ರಾಜಸ್ಥಾನ ರಾಯಲ್ಸ್ ನನ್ನ ಕ್ರಿಕೆಟ್ ಪ್ರಯಾಣದಲ್ಲಿ ಮಹತ್ವದ ಸ್ಥಾನ ಹೊಂದಿದೆ’ ಎಂದು ಬರೆದುಕೊಂಡಿದ್ದಾರೆ.

loader