ಟೀಂ ಇಂಡಿಯಾದ 3ನೇ ವಿಕೆಟ್ ಪತನ- ತಂಡಕ್ಕೆ ನಾಯಕ ಕೊಹ್ಲಿ ಆಸರೆ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 25, Jul 2018, 5:25 PM IST
warm-up match Ajinkya Rahane falls for 17 Virat Kohli walks in
Highlights

ಎಸೆಕ್ಸ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಂಗ್ಲರ ವಿರುದ್ದ ಕಣಕ್ಕಿಳಿದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿದೆ? ತಂಡದ ಮೊತ್ತವೆಷ್ಟು? ಈ ಕುರಿತ ವಿವರ ಇಲ್ಲಿದೆ.

ಚೆಲ್ಮ್ಸ್‌ಫೋರ್ಡ್(ಜು.25): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಎಸೆಕ್ಸ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ 3 ವಿಕೆಟ್ ಕಳೆದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡಿತು. ಧವನ್ ಡಕೌಟ್ ಆದರೆ, ಪೂಜಾರ 1 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮುರಳಿ ವಿಜಯ್ ಹಾಗೂ ಅಜಿಂಕ್ಯ ರಹಾನೆ ಚೇತರಿಕೆ ನೀಡೋ ಪ್ರಯತ್ನ ಮಾಡಿದರು.

 

 

ಅಜಿಂಕ್ಯ ರಹಾನೆ 17ರನ್ ಸಿಡಿಸಿ ಔಟಾದರು. ಇದೀಗ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಆರಂಭಿಕ ವಿಜಯ್ ಹಾಗೂ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿದೆ. ಸದ್ಯ ಭಾರತ 60 ರನ್ ಗಡಿ ದಾಟಿದೆ. 

loader