ಢಾಕಾ(ಮೇ.14): ಸದ್ಯ ಬಾಂಗ್ಲಾದೇಶ ತಂಡದ ಬೌಲಿಂಗ್ ಕೋಚ್ ಆಗಿರುವ ವಿಂಡೀಸ್‌ನ ಮಾಜಿ ಆಟಗಾರ ಕರ್ಟ್ನಿ ವಾಲ್ಶ್, ಹಂಗಾಮಿ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಖ್ಯಸ್ಥ ಅಕ್ರಮ್ ಖಾನ್ ಭಾನುವಾರ ಹೇಳಿದ್ದಾರೆ.
ಮುಂಬರುವ ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ವಾಲ್ಶ್ ಬಾಂಗ್ಲಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಬಾಂಗ್ಲಾ ಕೋಚ್ ಸ್ಥಾನವನ್ನು ತೊರೆದಿದ್ದ ಚಂದಿಕಾ ಹತುರಸಿಂಘ ಬಳಿಕ ಮುಖ್ಯ ಕೋಚ್ ಹುದ್ದೆಗೆ ಬಿಸಿಬಿ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿತ್ತು. ಆ ವೇಳೆಯಲ್ಲಿ ವಾಲ್ಶ್ ರನ್ನು ಕೇಳಿದಾಗ ಮುಖ್ಯ ಕೋಚ್ ಆಗಿ ಮುಂದುವರಿಯಲು ಸಮ್ಮತಿ ಸೂಚಿಸಿದರು ಎಂದು ಅಕ್ರಮ್ ತಿಳಿಸಿದ್ದಾರೆ.