ಫುಟ್ಬಾಲ್ ವಿಶ್ವಕಪ್: ಅಭಿಮಾನಿಗಳಿಗೆ ಸ್ವಾಗತ ಕೋರಿದ ಪುಟಿನ್
2018ರ ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಕೇವಲ 4 ದಿನ ಬಾಕಿ ಇದ್ದು ಪಂದ್ಯಾವಳಿ ವೀಕ್ಷಣೆಗೆ ಲಕ್ಷಾಂತರ ಅಭಿಮಾನಿಗಳು ರಷ್ಯಾ ತಲುಪಿದ್ದಾರೆ. ವಿಶ್ವಕಪ್ ವೀಕ್ಷಿಸಲು ಆಗಮಿಸುತ್ತಿರುವ ಅಭಿಮಾನಿಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವಾಗತಿಸಿದ್ದಾರೆ.
ಮಾಸ್ಕೊ[ಜೂ.10]: 2018ರ ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಕೇವಲ 4 ದಿನ ಬಾಕಿ ಇದ್ದು ಪಂದ್ಯಾವಳಿ ವೀಕ್ಷಣೆಗೆ ಲಕ್ಷಾಂತರ ಅಭಿಮಾನಿಗಳು ರಷ್ಯಾ ತಲುಪಿದ್ದಾರೆ. ವಿಶ್ವಕಪ್ ವೀಕ್ಷಿಸಲು ಆಗಮಿಸುತ್ತಿರುವ ಅಭಿಮಾನಿಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವಾಗತಿಸಿದ್ದಾರೆ.
ರಷ್ಯಾದಲ್ಲಿ ತಾವಿರುವಷ್ಟು ದಿನದ ಅನುಭವ ಅಹ್ಲಾದಕರ ಹಾಗೂ ಅವಿಸ್ಮರಣೀಯವಾಗಿರಲಿದೆ ಎಂದು ಪುಟಿನ್ ಹೇಳಿದ್ದಾರೆ.
‘ನಮ್ಮ ದೇಶಕ್ಕೆ, ಫುಟ್ಬಾಲ್ ಪ್ರೀತಿಸುವ ನೂರಾರು ದೇಶಗಳಿಂದ ಆಗಮಿಸುತ್ತಿರುವ ಅಭಿಮಾನಿಗಳಿಗೆ ಆತಿಥ್ಯ ವಹಿಸುವುದು ಅತ್ಯಂತ ಸಂತಸ ಹಾಗೂ ಹೆಮ್ಮೆಯ ವಿಚಾರವಾಗಿದೆ. ಕೇವಲ ಪಂದ್ಯಗಳು ಮಾತ್ರ ರೋಚಕತೆ ನೀಡುವುದಿಲ್ಲ, ಇಲ್ಲಿನ ವಾಸ್ತವ್ಯವೂ ರೋಚಕವಾಗಿರಲಿದೆ. ರಷ್ಯಾದ ಸಂಸ್ಕೃತಿ, ಆಹಾರ ಹಾಗೂ ಸ್ನೇಹಪರ ಜನರೊಂದಿಗಿನ ಒಡನಾಟ ಮರೆಯಲಾಗದ ಅನುಭವ ನೀಡಲಿದೆ’ ಎಂದು ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾರೆ.
ರಷ್ಯಾದ 11 ನಗರಗಳಲ್ಲಿ ಜರುಗುವ ಫಿಫಾ ಟೂರ್ನಿ ನೋಡಲು ಆಗಮಿಸುವ ಪ್ರವಾಸಿಗರಿಗೆ ಸ್ವಾಗತ ಕೋರಲು 13 ಬಿಲಿಯನ್ ಅಮರಿಕನ್ ಡಾಲರ್ ಖರ್ಚು ಮಾಡುತ್ತಿದೆ.