ಸೆಂಟ್ ಲೂಯಿಸ್(ಆ.04): ಐದು ಬಾರಿ ವಿಶ್ವ ಚಾಂಪಿಯನ್ ಚೆಸ್ ಪಟು ಭಾರತದ ವಿಶ್ವನಾಥನ್ ಆನಂದ್, ಸಿಂಕ್‌'ಫೀಲ್ಡ್ ಕಪ್ ಚೆಸ್ ಪಂದ್ಯಾವಳಿಯ 2ನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಪೀಟರ್ ಸ್ವೀಡ್ಲರ್ ಎದುರು ಡ್ರಾ ಸಾಧಿಸಿದರು.

ಟೂರ್ನಿಯಲ್ಲಿ ಮೊದಲ ಬಾರಿಗೆ ಕಪ್ಪು ಕಾಯಿಗಳೊಂದಿಗೆ ಆಟ ಆರಂಭಿಸಿದ ವಿಶ್ವನಾಥನ್ ಮೊದಲಿನಿಂದಲೇ ಪ್ರಭಾವಿ ಮೂವ್‌ಗಳಿಂದ ಅಂಕಗಳಿಸಿದರು. ಅತ್ತ ರಷ್ಯಾದ ಆಟಗಾರ ಕೂಡ ಆರಂಭದಲ್ಲಿ ಅನುಭವಿಸಿದ ಹಿನ್ನಡೆಗೆ ಎಚ್ಚೆತ್ತುಕೊಂಡು ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಆದರೆ ಅಂತಿಮವಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಆನಂದ್ ಯಶಸ್ವಿಯಾದರು. ಸ್ವೀಡ್ಲರ್ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದರು. ಇದೀಗ 2ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ್ದಾರೆ.

ಆನಂದ್ ಆಡಿರುವ ಎರಡೂ ಸುತ್ತಿನ ಪಂದ್ಯಗಳಲ್ಲೂ ಡ್ರಾ ಮಾಡಿಕೊಂಡು 1 ಅಂಕಗಳಿಸಿದ್ದಾರೆ.