ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ತನ್ನ ತೀಕ್ಷ್ಣ ಹಾಗೂ ವ್ಯಂಗ್ಯಭರಿತ ಟ್ವೀಟ್'ಗಳಿಗೆ ಫೇಮಸ್ ಆಗಿದ್ದಾರೆ. ಆದರೆ ಇಂದು ಅವರು ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ಶೇರ್ ಮಾಡಿರುವ ವಿಡಿಯೋ ಹಾಗೂ ಅದರೊಂದಿಗಿರುವ ಸಂದೇಶ ಮಾತ್ರ ಮನ ಮುಟ್ಟುವಂತಿದೆ. ಅಷ್ಟಕ್ಕೂ ಅವರು ಮಾಡಿರುವ ಟ್ವೀಟ್'ನಲ್ಲಿರುವ ವಿಡಿಯೋ ಯಾವುದು? ಅದರಲ್ಲಿ ಬರೆದುಕೊಂಡ ಸಂದೇಶವೇನು ಅಂತೀರಾ? ಇಲ್ಲಿದೆ ವಿಡಿಯೋ

ಭಾರತೀಯ ಸೇನೆಯ ವಿಡಿಯೋವೊಂದನ್ನು ವೀರೂ ಶೇರ್ ಮಾಡಿದ್ದು, ಇದರಲ್ಲಿ ಯೋಧನೊಬ್ಬ ವಿಮಾನದಿಂದ ಕೆಳಗೆ ಹಾರುವುದು ಕಂಡು ಬರುತ್ತದೆ. ಸದ್ಯ ಇದು ಯಾವ ಸಂದರ್ಭದ ದೃಶ್ಯಾವಳಿಯೆಂದು ತಿಳಿದು ಬಂದಿಲ್ಲವಾದರೂ, ಇಲ್ಲಿ ನಮ್ಮ ಯೋಧರ ಧೈರ್ಯ ಹಾಗೂ ಸಾಹಸದ ಅನಾವರಣವಾಗಿದೆ. ಇದನ್ನು ನೋಡಿದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವುದರಲ್ಲಿ ಅನುಮಾನವಿಲ್ಲ.
ಈ ವಿಡಿಯೋದೊಂದಿಗೆ ಸಂದೇಶವೊಂದನ್ನೂ ಬರೆದಿರುವ ವೀರೂ 'ನಮ್ಮನ್ನು ಕಾಯುವ ನಮ್ಮ ಸೈನಿಕರು, ನಮ್ಮಿಂದ ಏನೂ ಬಯಸದೆ ನಮಗಾಗಿ ನಿಸ್ವಾರ್ಥವಾಗಿ ಹಗಲಿರುಳೂ ಶ್ರಮಿಸುವ ತಾಯಿಗಿಂತಲೂ ಮಿಗಿಲಾದವರು. ಜಗತ್ತಿನ ಅತ್ಯಂತ ಶ್ರೇಷ್ಠ ಸೇನೆಗೆ ನನ್ನ ಪ್ರೀತಿ ಹಾಗೂ ಗೌರವ, ಜೈ ಹಿಂದ್' ಎಂದಿದ್ದಾರೆ. ಇವರ ಈ ಟ್ವೀಟ್ ಪ್ರೇಕ್ಷಕರ ಮನಗೆದ್ದಿದ್ದಲ್ಲದೆ, ಭಾವುಕರನ್ನಾಗಿಸಿದೆ.
ವೀರೂ ತಮ್ಮ ಹಾಸ್ಯಭರಿತ ಟ್ವೀಟ್'ಗಳಿಂದಲೇ ಫೇಮಸ್ ಆಗಿದ್ದಾರೆ. ಕ್ರಿಕೆಟರ್ಸ್'ಗಳ ಹುಟ್ಟುಹಬ್ಬದ ಸಂದರ್ಭದಲ್ಲಾಗಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಅವರು ತಮ್ಮ ವಿಭಿನ್ನ ಟ್ವೀಟ್'ಗಳಿಂದ ಚರ್ಚೆಯಲ್ಲಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ನಡೆದ ಚಾಂಪಿಯನ್ಸ್ ಟ್ರೋಫಿಯ ಟೀಂ ಇಂಡಿಯಾ ಹಾಗೂ ಪಾಕ್ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ಅವರು ಹಾಕಿದ್ದ ಟ್ವೀಟ್ ವಿವಾದ ಸೃಷ್ಟಿಸಿತ್ತು.