Asianet Suvarna News Asianet Suvarna News

ಕೋಚ್ ಹುದ್ದೆಗೆ ಆಯ್ಕೆಯಾದಲ್ಲಿ ಸೆಹ್ವಾಗ್ ಮಾಡ್ಬೇಕಾದ ಮೊದಲ ಕೆಲಸವಿದಂತೆ

ಒಂದುವೇಳೆ ರವಿಶಾಸ್ತ್ರಿ ಕೂಡಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಸೆಹ್ವಾಗ್ ಹಾಗೂ ಶಾಸ್ತ್ರಿ ನಡುವೆ ಕೋಚ್ ಹುದ್ದಗೆ ನೇರ ಸ್ಪರ್ಧೆ ನಡೆಯಲಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.

Virender Sehwag will be asked to keep his mouth shut if appointed coach

ಬೆಂಗಳೂರು(ಜೂ.30): ಕೋಚ್ ಆಯ್ಕೆಗೆ ಅಂತಿಮ ದಿನ ಹತ್ತಿರವಾಗುತ್ತಿದ್ದಂತೆ ಟೀಂ ಇಂಡಿಯಾ ಮುಖ್ಯಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರತೊಡಗಿದೆ. ಅದರಲ್ಲೂ ಅನಿಲ್ ಕುಂಬ್ಳೆ ಕೋಚ್ ರೇಸ್'ನಿಂದ ಹಿಂದೆ ಸರಿದಿದ್ದರಿಂದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈ ಹುದ್ದೆಯ ಪ್ರಮುಖ ಆಕಾಂಕ್ಷಿಯೆನಿಸಿದ್ದಾರೆ.

ಒಂದು ವೇಳೆ ಸೆಹ್ವಾಗ್ ಕೋಚ್ ಆಗಿ ಆಯ್ಕೆಯಾದರೆ, ತಮ್ಮ ಮಾತುಗಳಿಗೆ ಕಡಿವಾಣ ಹಾಕಿಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ಆಪ್ತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಹೌದು ವಿರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಆದರೆ ಕೋಚ್ ಆಗಿ ನೇಮಕವಾದಲ್ಲಿ ಬಾಯಿಗೆ ಬೀಗ ಹಾಕಿಕೊಳ್ಳಬೇಕಾಗುತ್ತದೆ. ಯಾವುದನ್ನು ಗಂಭೀರವಾಗಿ ಪರಿಗಣಿಸದ ಸೆಹ್ವಾಗ್ ಒಂದು ವೇಳೆ ಪಂದ್ಯ, ಸರಣಿ ಸೋತರೆ ಅದರಲ್ಲೇನಿದೆ ಎನ್ನಬಹುದು. ಇದು ಬಿಸಿಸಿಐ ಮುಖ್ಯಸ್ಥರಿಗೆ ಇರಿಸು-ಮುರಿಸನ್ನೂ ಉಂಟು ಮಾಡಬಹುದೆಂಬ ಭಯ ಕಾಡುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಸೆಹ್ವಾಗ್ ಹೊರತು ಪಡಿಸಿದಂತೆ ಮತ್ಯಾರು ಕೋಚ್ ಹುದ್ದೆಗೆ ಕಠಿಣ ಸ್ಪರ್ಧಿಗಳಿಲ್ಲ. ಇನ್ನೂ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಇದರ ಬೆನ್ನಲ್ಲೇ ರವಿಶಾಸ್ತ್ರಿ ಕೂಡಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗುತ್ತಿವೆ. ಒಂದುವೇಳೆ ರವಿಶಾಸ್ತ್ರಿ ಕೂಡಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಸೆಹ್ವಾಗ್ ಹಾಗೂ ಶಾಸ್ತ್ರಿ ನಡುವೆ ಕೋಚ್ ಹುದ್ದಗೆ ನೇರ ಸ್ಪರ್ಧೆ ನಡೆಯಲಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.

 

Follow Us:
Download App:
  • android
  • ios