ನವದಹೆಲಿ(ನ.04): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಒಪ್ಪಂದವನ್ನ ರದ್ದು ಮಾಡಲಾಗಿದೆ. ಸ್ವತಃ ಸೆಹ್ವಾಗ್ ಟ್ವೀಟ್ ಮೂಲಕ ಈ ವಿಚಾರ ಬಹಿರಂಗ ಪಡಿಸಿದ್ದರು.

 

 

ಸುದೀರ್ಘ 5 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊತೆ ಗುರುತಿಸಿಕೊಂಡಿದ್ದ ಸೆಹ್ವಾಗ್ ಅವರನ್ನ ನಡೆಸಿಕೊಂಡ ರೀತಿ ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಪಂಜಾಬ್ ತಂಡ ಆಟಗಾರನಾಗಿ ಬಳಿಕ ಮೆಂಟರ್ ಆಗಿ ಜವಾಬ್ದಾರಿ ನಿರ್ವಹಿಸಿದ ಸೆಹ್ವಾಗ್‌ಗೆ ಕೇವಲ ಇ-ಮೇಲ್ ಮೂಲಕ  ಒಪ್ಪಂದ ರದ್ದು ಮಾಡಿರುವ ವಿಚಾರವನ್ನ ತಿಳಿಸಲಾಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆಗಿನ ಮೆಂಟರ್ ಒಪ್ಪಂದವನ್ನ ರದ್ದು ಮಾಡಿದ್ದೇವೆ ಅನ್ನೋ ಇ-ಮೇಲ್ ಸಂದೇಶವನ್ನ ಸೆಹ್ವಾಗ್‌ಗೆ ರವಾನಿಸಲಾಗಿದೆ. ಆದರೆ ಪ್ರಶ್ನೆ ಇದಲ್ಲ, 5 ವರ್ಷಗಳಿಂದ ತಂಡಕ್ಕಾಗಿ ಸೇವೆ ಸಲ್ಲಿಸಿದ ಸೆಹ್ವಾಗ್‌ ಯಾವುದೇ ಸೂಚನೆ ನೀಡಿದೇ, ಚರ್ಚಿಸದೆ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ.

ಫ್ರಾಂಚೈಸಿ ಒನರ್, ಬಾಲಿವುಡ್ ನಟಿ ಪ್ರೀತಿ ಜಿಂಟಾಗೆ ಕನಿಷ್ಠ ಸೆಹ್ವಾಗ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿ ನಿರ್ಧಾರ ಪ್ರಕಟಿಸಬಹುದಿತ್ತು. ಸೆಹ್ವಾಗ್ ಮೇಲಿನ ಕೋಪದಿಂದ ಪ್ರೀತಿ ಜಿಂಟಾ ಈ ರೀತಿ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟೇ ಸೆಹ್ವಾಗ್ ಇಲ್ಲದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಂದ್ಯಗಳನ್ನ ವೀಕ್ಷಿಸೋದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.