ನಾಡಾ ಮಾಜಿ ವೇಯ್ಟ್ ಲಿಫ್ಟರ್ ಕುಂಜರಾಣಿ ದೇವಿಯನ್ನು ಉದ್ದೀಪನ ಮದ್ದು ವಿರೋಧಿ ಶಿಸ್ತು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ, ಕುಂಜುರಾಣಿ ದೇವಿ ಉದ್ದೀಪನಾ ಮದ್ದು ಸೇವನೆ ನಿಯಮ ಉಲ್ಲಂಘಿಸಿದ್ದಕ್ಕಾಗಿ 2001ರಲ್ಲಿ 6 ತಿಂಗಳುಗಳ ಕಾಲ ಅಮಾನತ್ತಾಗಿದ್ದರು.
ನವದೆಹಲಿ(ನ.10): ರಾಷ್ಟ್ರೀಯ ಉದ್ದೀಪನಾ ಮದ್ದು ನಿಯಂತ್ರಣ ಘಟಕ (ನಾಡಾ)ದ ಉದ್ದೀಪನಾ ಮದ್ದು ನಿಯಂತ್ರಣ ಕುರಿತ ಮೇಲ್ಮ ನವಿ ಸಮಿತಿ(ಎಡಿಎಪಿ)ಯ ಸದಸ್ಯರನ್ನಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ದೆಹಲಿಯ ಮಾಜಿ ಆಟಗಾರ ವಿನಯ್ ಲಂಬಾ ಅವರನ್ನು ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕ್ರಿಕೆಟಿಗರನ್ನು ಈ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಎಡಿಎಪಿಯು ನಿವೃತ್ತ ನ್ಯಾ.ಆರ್.ವಿ. ಈಶ್ವರ್ ನೇತೃತ್ವದ 6 ಸದಸ್ಯರನ್ನು ಒಳಗೊಂಡಿದೆ. ಹಿರಿಯ ವಕೀಲ ವಿಭಾ ದತ್ತ ಮಖಿಜಾ, ಡಾ.ನವೀನ್, ಹರ್ಷ ಮಹಾಜನ್ ಸಮಿತಿಯ ಇನ್ನುಳಿದ ಸದಸ್ಯರಾಗಿದ್ದಾರೆ.
ಇನ್ನು ನಾಡಾದ ಶಿಸ್ತು ಸಮಿತಿಯ ಸದಸ್ಯರನ್ನಾಗಿ ಮಾಜಿ ಅಥ್ಲೀಟ್, ರಾಜ್ಯದ ರೀತ್ ಅಬ್ರಾಹಂ ಸಹ ನೇಮಕಗೊಂಡಿದ್ದಾರೆ.