ವೀರೇಂದ್ರ ಸೆಹ್ವಾಗ್ ಹಾಗೂ ರವಿಶಾಸ್ತ್ರಿ ಸದ್ಯ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದ ರೇಸ್‌'ನಲ್ಲಿರುವವರಲ್ಲಿ ಪ್ರಮುಖರಾಗಿದ್ದಾರೆ.
ನವದೆಹಲಿ(ಜೂ.28): ಕ್ರಿಕೆಟ್'ಗೆ ವಿದಾಯ ಹೇಳಿದರೂ ಸದಾ ಒಂದಿಲ್ಲೊಂದು ಟ್ವೀಟ್ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ವಿರೇಂದ್ರ ಸೆಹ್ವಾಗ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು ವೀರೂ, ವಿವಾಹಿತ ಪುರುಷರಿಗೆ ತಮ್ಮ ಸಂಸಾರ ಸುಖವಾಗಿಟ್ಟುಕೊಳ್ಳಲು ಸಿಂಪಲ್ ಸೂತ್ರವೊಂದನ್ನು ನೀಡಿದ್ದಾರೆ.
‘ಹೆಂಡತಿ ಸುಖವಾಗಿದ್ದರೆ, ಜೀವನ ಸುಖವಾಗಿರುತ್ತದೆ’ ಎಂದು ಬರೆದು ತಾವು ಹಾಗೂ ತಮ್ಮ ಪತ್ನಿ ಜತೆಗಿರುವ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೆಂಡ್ ಆಗಿದ್ದು, ವೀರೂ ಸಲಹೆಗೆ ಬಹುತೇಕರು ಹೌದೆಂದು ತಲೆಯಾಡಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಹಾಗೂ ರವಿಶಾಸ್ತ್ರಿ ಸದ್ಯ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದ ರೇಸ್'ನಲ್ಲಿರುವವರಲ್ಲಿ ಪ್ರಮುಖರಾಗಿದ್ದಾರೆ.
