ಆಸ್ಟ್ರೇಲಿಯಾ ತಂಡವನ್ನು ಮೊದಲ ದಿನವೇ ಕೇವಲ 300 ರನ್'ಗಳಿಗೆ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕುಲ್ದೀಪ್ ಪ್ರದರ್ಶನದ ಬಗ್ಗೆ ಸೆಹ್ವಾಗ್ ಮೆಚ್ಚುಗೆಯ ನುಡಿಗಳನ್ನು ನೀವೇ ಒಮ್ಮೆ ನೋಡಿ...

ಬೆಂಗಳೂರು(ಮಾ.25) ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಯಾದವ್ ಚೊಚ್ಚಲ ಪಂದ್ಯದಲ್ಲಿಯೇ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಪಾದಾರ್ಪಣ ಪಂದ್ಯದಲ್ಲಿಯೇ ಕಾಂಗರೂ ಪಡೆಯ ಪ್ರಮುಖ ನಾಲ್ಕು ವಿಕೆಟ್ ಪಡೆಯುವ ಮೂಲಕ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ಟೀಂ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್'ಮನ್ ಸೆಹ್ವಾಗ್ ಅವರಂತೂ ಯುವ ಕ್ರಿಕೆಟಿಗನ ಪ್ರದರ್ಶನವನ್ನು ಮನಬಿಚ್ಚಿ ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾ ತಂಡವನ್ನು ಮೊದಲ ದಿನವೇ ಕೇವಲ 300 ರನ್'ಗಳಿಗೆ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವಹಿಸಿದ ಕುಲ್ದೀಪ್ ಪ್ರದರ್ಶನದ ಬಗ್ಗೆ ಸೆಹ್ವಾಗ್ ಮೆಚ್ಚುಗೆಯ ನುಡಿಗಳನ್ನು ನೀವೇ ಒಮ್ಮೆ ನೋಡಿ...

Scroll to load tweet…