Asianet Suvarna News Asianet Suvarna News

ಕೋಚ್ ಸ್ಥಾನ ಸಿಗದ ಸೆಹ್ವಾಗ್ ಈಗ ಎಲ್ಲಿದ್ದಾರೆ ಗೊತ್ತಾ..?

ಕ್ರಿಕೆಟ್ ನಿವೃತ್ತಿಯ ಬಳಿಕ ಟ್ವಿಟರ್ ಹಾಗೂ ವೀಕ್ಷಕ ವಿವರಣೆಯಲ್ಲಿ ಸಕ್ರಿಯವಾಗಿದ್ದ ವೀರೂ, ಇದೇ ಮೊದಲ ಬಾರಿಗೆ ಟಿವಿ ನಿರೂಪಣೆ ಮೂಲಕ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

Virender Sehwag goes holidaying to Canada after missing out on India coach job
  • Facebook
  • Twitter
  • Whatsapp

ನವದೆಹಲಿ(ಜು.14): ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದ ವಿರೇಂದ್ರ ಸೆಹ್ವಾಗ್ ಅವಕಾಶ ವಂಚಿತರಾಗಿದ್ದು, ಇದೀಗ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ.

ಹೌದು ರವಿಶಾಸ್ತ್ರಿಯನ್ನು ಟೀಂ ಇಂಡಿಯಾ ಕೋಚ್ ಆಗಿ ಬಿಸಿಸಿಐ ಘೋಷಿಸುತ್ತಿದ್ದಂತೆ, ವೀರೂ ಕೆನಡಾಗೆ ಪ್ರವಾಸ ಹೋಗಿದ್ದಾರೆ. ತಾವು ಕೆನಡಾದಲ್ಲಿ ಮೋಜು ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣವಾದ ಇನ್'ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೆನಡಾದಿಂದ ವಾಪಾಸ್ಸಾದ ಬಳಿಕ ಖಾಸಗಿ ಚಾನೆಲ್'ವೊಂದರಲ್ಲಿ 'ಉಮ್ಮೀದ್ ಇಂಡಿಯಾ' ಎನ್ನುವ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕ್ರಿಕೆಟ್ ನಿವೃತ್ತಿಯ ಬಳಿಕ ಟ್ವಿಟರ್ ಹಾಗೂ ವೀಕ್ಷಕ ವಿವರಣೆಯಲ್ಲಿ ಸಕ್ರಿಯವಾಗಿದ್ದ ವೀರೂ, ಇದೇ ಮೊದಲ ಬಾರಿಗೆ ಟಿವಿ ನಿರೂಪಣೆ ಮೂಲಕ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

Follow Us:
Download App:
  • android
  • ios