ಬಂಗಾರ್ ತೆರವಿನ ಬಳಿಕ ಸೆಹ್ವಾಗ್ ಆ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್'ನಲ್ಲಿ ಡೆಲ್ಲಿ ಡ್ಯಾಶಿಂಗ್ ಓಪನರ್ ಮತ್ತೊಮ್ಮೆ ಕಮಾಲ್ ಮಾಡುವ ಸಾಧ್ಯತೆಯಿದೆ.
ನವದೆಹಲಿ(ಡಿ.24): ಭಾರತದ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಹುದ್ದೆಗೇರಲಿದ್ದಾರಂತೆ. 2017ರ ಐಪಿಎಲ್ ಟೂರ್ನಿಯಲ್ಲಿ ಸೆಹ್ವಾಗ್, ಪಂಜಾಬ್ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಜಾಬ್ ಆಡಳಿತ ಮಂಡಳಿ ಕೂಡ ಸೆಹ್ವಾಗ್ ಅವರನ್ನು ಈ ಸ್ಥಾನಕ್ಕೆ ತರಬೇಕು ಎನ್ನುವ ಯೋಜನೆ ಹಾಕಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಹಿಂದೆ ಸಂಜಯ್ ಬಂಗಾರ್ ಪಂಜಾಬ್ ತಂಡಕ್ಕೆ ಕೋಚ್ ಆಗಿದ್ದರು. ಬಂಗಾರ್ ತೆರವಿನ ಬಳಿಕ ಸೆಹ್ವಾಗ್ ಆ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್'ನಲ್ಲಿ ಡೆಲ್ಲಿ ಡ್ಯಾಶಿಂಗ್ ಓಪನರ್ ಮತ್ತೊಮ್ಮೆ ಕಮಾಲ್ ಮಾಡುವ ಸಾಧ್ಯತೆಯಿದೆ.
ಪ್ರಸಕ್ತ ಭಾರತ ತಂಡದ ಸಹಾಯಕ ಕೋಚ್ ಆಗಿರುವ ಬಂಗಾರ್, ಪಂಜಾಬ್ ತಂಡವನ್ನು 2014ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಕೊಂಡೊಯ್ದಿದ್ದರು. ಬಂಗಾರ್ 'ಕಳೆದ ನವೆಂಬರ್'ನಲ್ಲಿಯೇ ಪಂಜಾಬ್ ತಂಡಕ್ಕೆ ಗುಡ್ ಬೈ ಹೇಳಿದ್ದೇನೆ. ಆದರೆ ಆಡಳಿತ ಮಂಡಳಿ ಈಗ ರಾಜೀನಾಮೆಯನ್ನು ಅಂಗೀಕರಿಸಿದೆ' ಎಂದು ಬಂಗಾರ್ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರತಿ ಆವೃತ್ತಿಯಲ್ಲಿಯೂ ತಂಡದ ಆಟಗಾರರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಕಳೆದ 2 ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು ಎಂದು ಬಂಗಾರ್ ತಿಳಿಸಿದರು.
