ಎದುರಾಳಿ ಬೌಲರ್'ಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದ ಸೆಹ್ವಾಗ್, ಗೇಲ್, ಅಫ್ರಿದಿ ಟಿ-10 ಕ್ರಿಕೆಟ್ ಲೀಗ್ ಪಂದ್ಯವನ್ನಾಡಲು ರೆಡಿಯಾಗಿದ್ದಾರೆ.

ನವದೆಹಲಿ(ಆ.24): ಏಕದಿನ ಹಾಗೂ ಟಿ20 ಕ್ರಿಕೆಟ್'ನಲ್ಲಿ ಬ್ಯಾಟ್ಸ್'ಮನ್'ಗಳ ಅಬ್ಬರವನ್ನು ನೋಡಿರುತ್ತೀರ. ಆದರೆ 10 ಓವರ್'ಗಳ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ನ ಸ್ಫೋಟಕ ಬ್ಯಾಟ್ಸ್'ಮನ್'ಗಳು ಬ್ಯಾಟಿಂಗ್ ನಡೆಸಿದರೆ ಹೇಗಿರಬೇಡ..?

ಹೌದು ಎದುರಾಳಿ ಬೌಲರ್'ಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದ ಸೆಹ್ವಾಗ್, ಗೇಲ್, ಅಫ್ರಿದಿ ಟಿ-10 ಕ್ರಿಕೆಟ್ ಲೀಗ್ ಪಂದ್ಯವನ್ನಾಡಲು ರೆಡಿಯಾಗಿದ್ದಾರೆ. ಯುಎಇನಲ್ಲಿ ನಡೆಯಲಿರುವ 10 ಓವರ್‌'ಗಳ ಕ್ರಿಕೆಟ್ ಲೀಗ್(ಟೆನ್ ಕ್ರಿಕೆಟ್ ಲೀಗ್)ನಲ್ಲಿ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ ಹಾಗೂ ಕುಮಾರ್ ಸಂಗಕ್ಕಾರ ಪಾಲ್ಗೊಳ್ಳಲಿದ್ದಾರೆ.

ಪಂದ್ಯಾವಳಿಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಲಿವೆ. ಪಂದ್ಯದಲ್ಲಿ ಪ್ರತಿ ತಂಡಗಳು ತಲಾ 10 ಓವರ್ ಆಡಲಿದ್ದು, 90 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳ್ಳಲಿದೆ.

ಡಿ.21ರಿಂದ 24ರ ವರೆಗೂ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.