ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಠಿಣ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಬಹುದುದೆಂದು ಹುರಿದುಂಬಿಸಿದರು.
ಬೆಂಗಳೂರು(ಮೇ.04): ಬೇಸಿಗೆ ಅಂಗವಾಗಿ ನಡೀತಿರುವ ಬೆಂಗಳೂರು ಪೂರ್ವ ತಾಲೂಕಿನ ಹಾಲನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಚಾಲನೆ ನೀಡಿದರು.
ರಣಜಿ ಮಾಜಿ ಕ್ರಿಕೆಟಿಗ ಜೆ.ಅರುಣ್ ಕುಮಾರ್ ಬಿಯಾಂಡ್ ಟೆಕ್ನಿಕ್ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿದ್ದು ಇದರ ಅಂಗವಾಗಿ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ 8 ವಿಶೇಷ ಗ್ಯಾಲರಿಗಳನ್ನು ಮಾಡಲಾಗಿದ್ದು ಇದಕ್ಕೆ ವೀರೇಂದ್ರ ಸೆಹ್ವಾಗ್ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಠಿಣ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಬಹುದುದೆಂದು ಹುರಿದುಂಬಿಸಿದರು. ವೃತ್ತಿಪರತೆ ರೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ವೇಳೆ ದೆಹಲಿ ರಣಜಿ ಕ್ರಿಕೆಟಿಗ ಮಿಥುನ್, ಅಕಾಡೆಮಿಯ ಸ್ಥಾಪಕ ಜೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.
