Asianet Suvarna News Asianet Suvarna News

ವೀರು'ಗೆ ಪ್ರಮುಖ ಜವಾಬ್ದಾರಿ ವಹಿಸಿದ ಕೇಂದ್ರ ಸರ್ಕಾರ

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ 12 ಮಂದಿ ಸದಸ್ಯರಿದ್ದು, ಸಮಿತಿಯಲ್ಲಿನ ಸದಸ್ಯರು ಆಗಸ್ಟ್ 3 ರಂದು ಸಭೆ ಸೇರಲಿದ್ದು, ವರ್ಷದ ಕ್ರೀಡಾ ಸಾಧಕರನ್ನು ಆರಿಸಲಿದೆ.

Virender Sehwag and PT Usha set to pick Khel Ratna and Arjuna

ನವದೆಹಲಿ(ಜು.27): ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಮಾಜಿ ಅಥ್ಲೀಟ್ ಪಿ.ಟಿ. ಉಷಾ ಅವರು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ನೀಡುವ ಸಮಿತಿಗೆ ನೇಮಕವಾಗಿದ್ದಾರೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ 12 ಮಂದಿ ಸದಸ್ಯರಿದ್ದು, ಈ ಸಮಿತಿಯಲ್ಲಿನ ಸದಸ್ಯರು ಆಗಸ್ಟ್ 3 ರಂದು ಸಭೆ ಸೇರಲಿದ್ದು, ಈ ವರ್ಷದ ಕ್ರೀಡಾ ಸಾಧಕರನ್ನು ಆರಿಸಲಿದೆ.

ಸಮಿತಿಯ ಇತರೆ ಸದಸ್ಯರು

ಮುಕುಂದ್ ಖೇಲ್ಕರ್ (ಬಾಕ್ಸಿಂಗ್), ಸುನೀಲ್ ದಬ್ಬಾಸ್ (ಕಬಡ್ಡಿ), ಎಂ.ಆರ್. ಮಿಶ್ರಾ (ಪತ್ರಕರ್ತ), ಎಸ್. ಖನ್ನಾ (ಪತ್ರಕರ್ತ), ಸಂಜೀವ್ ಕುಮಾರ್ (ಪತ್ರಕರ್ತ), ಲತಾ ಮಾದೇವಿ (ಪ್ಯಾರಾ ಅಥ್ಲೀಟ್), ಅನಿಲ್ ಖನ್ನಾ (ಕ್ರೀಡಾ ಆಡಳಿತ ಮಂಡಳಿ), ಇಂಜಿತ್ ಶ್ರೀವಾಸ್ತವ್ (ಡಿಜಿ, ಸಾಯ್) ಮತ್ತು ರಾಜ್ವೀರ್ ಸಿಂಗ್ (ಕ್ರೀಡಾ ಸಚಿವಾಲಯದ ಜಂಟಿ ಕಾರ್ಯದರ್ಶಿ) ಸಮಿತಿಯಲ್ಲಿನ ಇತರೆ ಸದಸ್ಯರಾಗಿದ್ದಾರೆ.

Follow Us:
Download App:
  • android
  • ios