ಕೊನೆಯ ದಿನವಾದ ನಾಳೆ ಭಾರತ ಗೆಲ್ಲಲು 7 ವಿಕೇಟ್'ಗಳು ಉರುಳಿಸಬೇಕಿದ್ದು ಶ್ರೀಲಂಕಾ ಕೂಡ ತನ್ನ ಗುರಿ ಮುಟ್ಟಲು 379 ರನ್'ಗಳು ಬೇಕಾಗಿದೆ.
ನವದೆಹಲಿ(ಡಿ.05): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಗೆಲುವಿಗೆ ಭಾರತಕ್ಕೆ 7 ಮೆಟ್ಟಿಲುಗಳಷ್ಟೆ ಬಾಕಿಯಿದೆ. ನಾಲ್ಕನೆ ದಿನದಾಟದಲ್ಲಿ ಭಾರತದ ಆಟಗಾರರು ಮೇಲುಗೈ ಸಾಧಿಸಿದರು.
2ನೇ ಇನ್ನಿಂಗ್ಸ್'ನಲ್ಲಿ 246/5 ಡಿಕ್ಲೇರ್ಡ್ ಮಾಡಿಕೊಂಡ ಟೀಂ ಇಂಡಿಯಾ ಶ್ರೀಲಂಕಾ ಗೆಲುವಿಗೆ 410 ರನ್ ಗುರಿ ನೀಡಿದೆ. ದಿನದಾಟದ ಅಂತ್ಯದ ಹೊತ್ತಿಗೆ 2ನೇ ಇನ್ನಿಂಗ್ಸ್' ಆರಂಭಿಸಿದ ಸಂಹಳಿ ಪಡೆ 16 ಓವರ್'ಗಳ 31 ರನ್'ಗಳಿಗೆ 3 ವಿಕೇಟ್ ಕಳೆದುಕೊಂದು ಸೋಲಿನ ಸುಳಿಯತ್ತಾ ಸಾಗಿದೆ.
ಕೊನೆಯ ದಿನವಾದ ನಾಳೆ ಭಾರತ ಗೆಲ್ಲಲು 7 ವಿಕೇಟ್'ಗಳು ಉರುಳಿಸಬೇಕಿದ್ದು ಶ್ರೀಲಂಕಾ ಕೂಡ ತನ್ನ ಗುರಿ ಮುಟ್ಟಲು 379 ರನ್'ಗಳು ಬೇಕಾಗಿದೆ. ಸ್ಪಿನ್ನರ್ ಅಶ್ವಿನ್ ಇಬ್ಬರು ಪ್ರಮುಖ ಆಟಗಾರರ 2 ವಿಕೇಟ್ ಕಬಳಿಸಿದ್ದು, ಆರಂಭಿಕ ಬ್ಯಾಟ್ಸ್'ಮೆನ್ ಸಮರವಿಕ್ರಮ ಶಮಿ ಬೌಲಿಂಗ್'ಗೆ ಔಟಾಗಿದ್ದಾರೆ.
ಮತ್ತೆ ಮಿಂಚಿದ ಕೊಹ್ಲಿ, ರೋಹಿತ್, ಧವನ್
2ನೇ ಇನ್ನಿಂಗ್ಸ್'ನಲ್ಲಿ ಶಿಖರ್ ಧವನ್(67),ಕೊಹ್ಲಿ(50), ರೋಹಿತ್ ಶರ್ಮಾ(50 ಅಜೇಯ) ಹಾಗೂ ಚೇತೇಶ್ವರ ಪೂಜಾರ (49) ರನ್ ಗಳಿಸಿ 246/5 ಡಿಕ್ಲೇರ್ಡ್ ಮಾಡಿಕೊಂಡು 410 ರನ್ ಗುರಿ ನೀಡಿದರು. ಟೀಂ ಇಂಡಿಯಾ ಕೊನೆಯ ದಿನದಲ್ಲಿ ಮಧ್ಯಾಹ್ನವೇ ಆಟ ಮುಗಿಸಿ ಸರಣಿಯನ್ನು 2-0 ಗೆಲ್ಲುವ ವಿಶ್ವಾಸದಲ್ಲಿದೆ.
ಸ್ಕೋರ್
ಶ್ರೀಲಂಕಾ ಮೊದಲ ಇನ್ನಿಂಗ್ಸ್ 373/10
(ಚಾಂಡಿಮಲ್ 164,ಶಮಿ 85/2, ಇಶಾಂತ್ 98/3, ಜಡೇಜಾ 86/2, ಅಶ್ವಿನ್ 80/3)
ಭಾರತ ದ್ವಿತೀಯ ಇನ್ನಿಂಗ್ಸ್ 246/5 ಡಿಕ್ಲೇರ್
(ಶಿಖರ್ ಧವನ್ 67,ಪೂಜಾರ 49, ಕೊಹ್ಲಿ 50,ರೋಹಿತ್ ಶರ್ಮಾ 50)
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ 31/3 (4ನೇ ದಿನದಂತ್ಯಕ್ಕೆ)
(ರವೀಂದ್ರ ಜಡೇಜಾ 5/2)
