ಇಂಗ್ಲೆಂಡ್ ಪ್ರವಾಸಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಕಸರತ್ತು

Virat Kohli working hard to regain fitness for England tour
Highlights


ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಕಡೆಗೆ ಗಮನ ನೀಡಿದ್ದಾರೆ. ಆದರೆ ಕೊಹ್ಲಿ ಇಂಜುರಿ ಗಂಭೀರತೆ ಕುರಿತು ಬಿಸಿಸಿಐ ಮೌನ ವಹಿಸಿದೆ.

ದೆಹಲಿ(ಮೇ.30) ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ಫಿಟ್ನೆಸ್ ಕುರಿತು ಅತೀವ ಗಮನ ಹರಿಸುವ ಕೊಹ್ಲಿ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಲೀಗ್ ಹಂತದಿಂದಲೇ ನಿರ್ಗಮಿಸಿತ್ತು. ಐಪಿಎಲ್ ಬಳಿಕ ಇಂಗ್ಲೀಷ್ ಕೌಂಟಿ ಕ್ರಿಕೆಟ್ ಆಡಲು ಸಜ್ಜಾಗಿದ್ದ ಕೊಹ್ಲಿಗೆ ಇಂಜುರಿ ಸಮಸ್ಯೆ ಎದುರಾಗಿತ್ತು. ಸನ್ ರೈಸರ್ಸ್ ಹೈದರಾಬಾದ್ ವಿರುದ್ದಧ ಐಪಿಎಲ್‌ನ 51ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಕೌಂಟಿ ಕ್ರಿಕೆಟ್‌ನಿಂದ ಹಿಂದೆ ಸರಿದ ಕೊಹ್ಲಿ ಇದೀಗ ಚೇತರಿಸಿಕೊಂಡು ಫಿಟ್ನೆಸ್ ಕಡೆ ಗಮನ ಹರಿಸಿದ್ದಾರೆ. 

 

 

ವಿರಾಟ್ ಕೊಹ್ಲಿ ಚೇತರಿಸಿಕೊಂಡಿದ್ದಾರೆ ನಿಜ. ಆದರೆ ಕೊಹ್ಲಿ ಗಾಯದ ಗಂಭೀರತೆ ಕುರಿತು ಬಿಸಿಸಿಐ ಮೌನ ವಹಿಸಿದೆ. ಐಪಿಎಲ್ ಟೂರ್ನಿ ವೇಳೆ ಗಾಯಗೊಂಡ ವಿರಾಟ್ ಕೊಹ್ಲಿಯ ಭುಜದ ಎಲುಬು ಜಾರಿದೆ ಎಂದು ಬಿಸಿಸಿಐ ಆರಂಭದಲ್ಲಿ ಸ್ಪಷ್ಟಪಡಿಸಿತ್ತು. ಆದರೆ ಸದ್ಯ ಕೊಹ್ಲಿ ಇಂಜುರಿ ಕುರಿತು ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಸಿಸಿಐ ಮೆಡಿಕಲ್ ತಂಡ ಕೊಹ್ಲಿ ಚಿಕಿತ್ಸೆ ನೀಡುತ್ತಿದೆ. ಜೂನ್ 15 ರಂದು ಕೊಹ್ಲಿ ಬೆಂಗಳೂರಿನ ಎನ್‌ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಬೇಕಿದೆ. ಆಗಸ್ಟ್‌ನಲ್ಲಿ ಭಾರತ 5 ಟೆಸ್ಟ್ ಪಂದ್ಯದ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕಾಗಿ ಕೊಹ್ಲಿ ಈಗಲೇ ಅಭ್ಯಾಸ ಶುರುಮಾಡಿದ್ದಾರೆ. ಆದರೆ ಕೊಹ್ಲಿ ಇಂಜುರಿ ಸಮಸ್ಯೆ ಗಂಭೀರವಾಗಿದ್ದಲ್ಲಿ, ಟೀಮ್ಇಂಡಿಯಾಗೆ ಸಂಕಷ್ಟ ಎದುರಾಗಲಿದೆ.
 

loader