ಟ್ವಿಟರ್‌ನಲ್ಲಿ ವೀಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಅವರು, ‘ಇದು ನಿಮ್ಮ ಕೊನೇ ಓಟವಾಗಿರಬಹುದು. ಆದರೆ ವಿಶ್ವದ ವೇಗದ ಮಾನವ ಎನ್ನುವ ಬಿರುದು ಸದಾ ನಿಮ್ಮೊಂದಿಗೆಯೇ ಇರಲಿದೆ’ ಎಂದು ಬರೆದಿದ್ದಾರೆ.
ಕೊಲಂಬೊ(ಆ.04): ವೃತ್ತಿಬದುಕಿನ ಕೊನೆ ಓಟಕ್ಕೆ ಸಿದ್ಧವಾಗಿರುವ ಉಸೇನ್ ಬೋಲ್ಟ್ಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.
ಟ್ವಿಟರ್ನಲ್ಲಿ ವೀಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಅವರು, ‘ಇದು ನಿಮ್ಮ ಕೊನೇ ಓಟವಾಗಿರಬಹುದು. ಆದರೆ ವಿಶ್ವದ ವೇಗದ ಮಾನವ ಎನ್ನುವ ಬಿರುದು ಸದಾ ನಿಮ್ಮೊಂದಿಗೆಯೇ ಇರಲಿದೆ’ ಎಂದು ಬರೆದಿದ್ದಾರೆ.
ಜತೆಗೆ ವೀಡಿಯೋದಲ್ಲಿ ಕೊಹ್ಲಿ ‘ನಿಮ್ಮ ನಿವೃತ್ತಿ ನಮ್ಮೆಲ್ಲರಿಗೂ ಬೇಸರ ಮೂಡಿಸುತ್ತಿದೆ. ನಿಮಗೆ ಯಾವತ್ತಾದರೂ ಕ್ರಿಕೆಟ್ ಆಡಬೇಕು ಎನಿಸಿದರೆ ನಾನು ಎಲ್ಲಿರುತ್ತೇನೆ ಎಂದು ನಿಮಗೆ ತಿಳಿದಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
