ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಂಡ್‌ ಟೀಂನ ಫೋಟೋವೊಂದು ಸೋಶಿಯಲ್‌ ಮೀಡಿಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾನುವಾರ ಕಾನ್ಪುರ್‌'ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ಟೀಂ ಇಂಡಿಯಾ ಸತತ 7ನೇ ಏಕದಿನ ಸರಣಿ ಗೆದ್ದು ಹೊಸ ದಾಖಲೆ ಬರೆದಿದೆ.
ನವದೆಹಲಿ(ಅ.30): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಡ್ ಟೀಂನ ಫೋಟೋವೊಂದು ಸೋಶಿಯಲ್ ಮೀಡಿಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾನುವಾರ ಕಾನ್ಪುರ್'ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ಟೀಂ ಇಂಡಿಯಾ ಸತತ 7ನೇ ಏಕದಿನ ಸರಣಿ ಗೆದ್ದು ಹೊಸ ದಾಖಲೆ ಬರೆದಿದೆ.
ಇದೇ ಖುಷಿಯಲ್ಲಿ ಕೊಹ್ಲಿ ಅಂಡ್ ಟೀಂ ಫುಲ್ ಸೆಲೆಬ್ರೆಷನ್ ಮಾಡಿದೆ. ನಾಯಕ ಕೊಹ್ಲಿ ಪಡೆ ತೊಡೆ ತಟ್ಟಿರುವ ಫೋಟೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ. ರೋಚಕ ಪಂದ್ಯದಲ್ಲಿ ಗೆದ್ದ ಭಾರತ ಸತತ 7ನೇ ODI ಸರಣಿ ಗೆದ್ದ ಕೊಹ್ಲಿ ಪಡೆ! ಮ್ಯಾಚ್ ಮುಗಿದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ಕುಣಿದು ಕುಪ್ಪಿಳಿಸಿರುವ ಫೋಟೋ ಟ್ವೀಟ್ ಮಾಡಿದ್ದಾರೆ.
ಟ್ವೀಟ್ಟರ್ನಲ್ಲಿ ಕೊಹ್ಲಿ ತಾವು ಹಾಗೂ ಇತರ ಆಟಗಾರರು ತೊಡೆ ತಟ್ಟಿರುವ ಫೋಟೋ ಸಮೇತ "Great team work, amazing win!Celebrations.. Jatt ji style!" ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ವೈರಲ್ ಆಗಿದೆ.
