ಕೊಹ್ಲಿ ಬದಲಿಗೆ 15ರ ಪಟ್ಟಿಯಲ್ಲಿ ಪಂಜಾಬಿನ ವೇಗದ ಬೌಲರ್ ಸಿದ್ಧಾರ್ಥ್ ಕೌಲ್'ಗೆ ಅವಕಾಶ ನೀಡಲಾಗಿದೆ.

ಮುಂಬೈ(ನ.27): ನಾಯಕ ವಿರಾಟ್ ಕೊಹ್ಲಿ ಅವರಿಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಡಿಸೆಂಬರ್ 2ರಂದು ನಡೆಯುವ ಮೂರನೆ ಟೆಸ್ಟ್'ಗೆ ಕೊಹ್ಲಿಯೇ ನಾಯಕರಾಗಿರುತ್ತಾರೆ.

ಕೊಹ್ಲಿ ಬದಲಿಗೆ 15ರ ಪಟ್ಟಿಯಲ್ಲಿ ಪಂಜಾಬಿನ ವೇಗದ ಬೌಲರ್ ಸಿದ್ಧಾರ್ಥ್ ಕೌಲ್'ಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಕನ್ನಡಿಗ ಮನೀಶ್ ಪಾಂಡೆ ಸ್ಥಾನ ಉಳಿಸಿಕೊಂಡಿದ್ದಾರೆ. ಏಕದಿನ ಪಂದ್ಯಗಳು ಡಿಸೆಂಬರ್ 10ರಿಂದ ಶುರುವಾಗಲಿದೆ.

ತಂಡ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ (ವಿಕೇಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲ್'ದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್'ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್