ಪರ್ತ್[ಡಿ.15]: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಮೊದಲನೇ ದಿನದಾಟದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗಾಳಿಯಲ್ಲಿ ಹಾರಿ ಹಿಡಿದ ಕ್ಯಾಚ್ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 

ಚಹಾ ವಿರಾಮದ ಬಳಿಕ ಇಶಾಂತ್ ಶರ್ಮಾ ಎಸೆದ 55ನೇ ಓವರ್‌ನ ಮೊದಲ ಎಸೆತದ ಚೆಂಡು ಪೀಟರ್ ಹ್ಯಾಂಡ್ಸ್‌ಕಂಬ್ ಬ್ಯಾಟ್‌ಗೆ ತಾಗಿ, 2ನೇ ಸ್ಲಿಪ್‌ನಲ್ಲಿ ನಿಂತಿದ್ದ ಕೊಹ್ಲಿಯನ್ನು ಮೀರಿ ಎತ್ತರದಲ್ಲಿ ಸಾಗಿತು. ತಕ್ಷಣವೇ ಜಿಗಿದ ಕೊಹ್ಲಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೀಗಿತ್ತು ನೋಡಿ ಆ ಕ್ಷಣ...

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ 326 ರನ್ ಬಾರಿಸಿ ಆಲೌಟ್ ಆಗಿದೆ.