ನವದೆಹಲಿ(ಜು.18): ನಾಯಕ ವಿರಾಟ್‌ ಕೊಹ್ಲಿ ಭಾರತ ತಂಡದೊಂದಿಗೆ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ತೆರಳಲಿದ್ದು, 3 ಟಿ20, 3 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. 

ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್!

ಈ ಮೊದಲು ಕೊಹ್ಲಿ, ವಿಶ್ರಾಂತಿ ಪಡೆಯಲಿದ್ದು ಸೀಮಿತ ಓವರ್‌ ಸರಣಿಗಳಲ್ಲಿ ಆಡುವುದಿಲ್ಲ ಎನ್ನಲಾಗಿತ್ತು. ಆದರೆ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಸೋಲಿನಿಂದ ಬೇಸರಗೊಂಡಿರುವ ವಿರಾಟ್‌, ವಿಂಡೀಸ್‌ ಪ್ರವಾಸದೊಂದಿಗೆ ಹೊಸ ಅಧ್ಯಾಯ ಆರಂಭಿಸಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೊಹ್ಲಿ ಆಯ್ಕೆ ಸಮಿತಿಗೆ ತಾವು ಪೂರ್ಣ ಪ್ರವಾಸಕ್ಕೆ ಲಭ್ಯರಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಸ್ಪ್ರೇಲಿಯಾ ಪ್ರವಾಸದಿಂದ ಕೊಹ್ಲಿ ನಿರಂತರ ಕ್ರಿಕೆಟ್‌ ಆಡುತ್ತಿದ್ದಾರೆ. ಐಪಿಎಲ್‌ನಲ್ಲೂ ವಿರಾಟ್‌ ವಿಶ್ರಾಂತಿ ಪಡೆಯದೆ ಆರ್‌ಸಿಬಿ ಪರ ಆಡಿದ್ದರು.

ಟೀಂ ಇಂಡಿಯಾ ಸೋಲಿಗೆ ಕೋಚ್ ರವಿಶಾಸ್ತ್ರಿ ಕಾರಣ..?

ವಿಶ್ವಕಪ್ ಮುಕ್ತಾಯವಾದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡಕ್ಕೆ ನಾಯಕತ್ವ ನೀಡಿ, ವಿರಾಟ್‌ಗೆ ಟೆಸ್ಟ್ ಕ್ರಿಕೆಟ್ ನಾಯಕತ್ವದಲ್ಲಿ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟಿದ್ದರು.