ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡು ಹೊರಗುಳಿದಿದ್ದ ರಾಹುಲ್ ಸದ್ಯ ಫಿಟ್ ಆಗಿರುವುದರಿಂದ 2ನೇ ಟೆಸ್ಟ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಶಾಖಪಟ್ಟಣಂ(ನ.16): ಇದೇ 17ರಿಂದ ನಡೆಯುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆರಂಭಿಕ ಆಟಗಾರರನ್ನಾಗಿ ಕಣಕ್ಕಿಳಿಸಲು ಕರ್ನಾಟಕದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರೇ ಮೊದಲ ಆಯ್ಕೆ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡು ಹೊರಗುಳಿದಿದ್ದ ರಾಹುಲ್ ಸದ್ಯ ಫಿಟ್ ಆಗಿರುವುದರಿಂದ 2ನೇ ಟೆಸ್ಟ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸರಣಿಯಲ್ಲಿ ಅನುಭವಿ ಗೌತಮ್ ಗಂಭೀರ್ ಅವರನ್ನು ಯಾವುದಾದರೂ ಇತರೆ ವಿಭಾಗದಲ್ಲಿ ಆಡಿಸಲು ಚಿಂತಿಸಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿ ಇಂಗ್ಲೆಂಡ್ ಎದುರು ನೀರಸ ಡ್ರಾ ಸಾಧಿಸಿತ್ತು.

ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸುತ್ತಿರುವ ಕೆ.ಎಲ್ ರಾಹುಲ್ ರಾಜಸ್ಥಾನ ತಂಡದೆದುರು ಮೊದಲ ಇನಿಂಗ್ಸ್'ನಲ್ಲಿ 76 ಹಾಗೂ ಎರಡನೇ ಇನಿಂಗ್ಸ್'ನಲ್ಲಿ 106 ರನ್ ಗಳಿಸಿ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.